ಅಜೆಕಾರು: ಲಯನ್ಸ್ ಕ್ಲಬ್ ಅಜೆಕಾರು,ಕ್ಯಾಥೊಲಿಕ್ ಸಭಾ ಹಾಗೂ ಮರ್ಣೆ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಕಂಪಾನಿಯೋ ವೆಲ್ ನೆಸ್ ಸೆಂಟರ್ ಉಡುಪಿ ವತಿಯಿಂದ ಜುಲೈ 26 ರಿಂದ ಒಂದು ತಿಂಗಳ ಕಾಲ ಸಾರ್ವಜನಿಕರಿಗಾಗಿ ಉಚಿತ ಫಿಜಿಯೋಥೆರಪಿ ಶಿಬಿರವನ್ನು ಅಜೆಕಾರು ಕೈಕಂಬದ ಆಶೀರ್ವಾದ್ ಕಾಂಪ್ಲೆಕ್ಸ್ ನಲ್ಲಿ ಆಯೋಜಿಸಲಾಗಿದೆ.
ರಕ್ತದೊತ್ತಡ, ಡಯಾಬಿಟಿಸ್, ಪಾರ್ಶ್ವವಾಯು ಅಥವಾ ಸ್ಟ್ರೋಕ್, ಪಾರ್ಕಿಂನ್ಸನ್, ಕಾಲುಗಂಟು ನೋವು, ಬೆನ್ನುನೋವು, ಥೈರಾಯ್ಡ್, ಮೈಗ್ರೆನ್, ಕಾಲಿನಲ್ಲಿ ಊತ, ಕಾಲುಗಳ ನರ ಉಬ್ಬುವಿಕೆ ಅಥವಾ ವೆರಿಕೋಸ್ ವೇನ್ ನಂತಹ 120ಕ್ಕೂ ಅಧಿಕ ಸಮಸ್ಯೆಗಳಿಗೆ ಇಲ್ಲಿ ಥೆರಪಿ ನೀಡಲಾಗುತ್ತದೆ.
ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಈ ಶಿಬಿರ ನಡೆಯಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಶಿಬಿರದ ಸದುಪಯೋಗ ಪಡಿಸಿಕೊಳ್ಳಬೇಕೆಂದು ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಥಾಮಸ್ ಲೂಕಸ್ ತಿಳಿಸಿದ್ದಾರೆ.