ಬೆಂಗಳೂರು :ಅಬಕಾರಿ ಸುಂಕ ಹೆಚ್ಚಳ ಹಿನ್ನಲೆಯಲ್ಲಿ ಇಂದಿನಿಂದ ಮದ್ಯದ ದರದಲ್ಲಿ ಶೇ 20ರಷ್ಟು ದರ ಏರಿಕೆಯಾಗಲಿದ್ದು ರಾಜ್ಯ ಸರ್ಕಾರ ಪಾನಪ್ರಿಯರ ಜೇಬಿಗೆ ಕತ್ತರಿ ಹಾಕಲಿದೆ. ಸಿಎಂ ಸಿದ್ದು ನೇತೃತ್ವದ ರಾಜ್ಯ ಸರ್ಕಾರ ತನ್ನ ಬಜೆಟ್‌ನಲ್ಲಿ ಅಬಕಾರಿ ಸುಂಕವನ್ನು ಏರಿಕೆಯ ಸುಳಿವು ನೀಡಿತ್ತು. ಇದೀಗ ಜುಲೈ 21ರಿಂದಲೇ ಎಲ್ಲಾ ವಿಧದ ಮದ್ಯದ ಬೆಲೆ ಹೆಚ್ಚಳವಾಗಲಿದ್ದು ಪಾನಪ್ರಿಯರ ಗಂಟಲು ಸುಡುವುದು ಖಾತ್ರಿಯಾಗಿದೆ.
ರಾಜ್ಯ ಸರ್ಕಾರವು ಈಗಾಗಲೇ ತನ್ನ 5 ಗ್ಯಾರಟಿಗಳನ್ನು ಜಾರಿಗೊಳಿಸಿದ್ದು ಇದರಿಂದ ಈ ಯೋಜನೆಗಳಿಗೆ ಹಣ ಹೊಂದಿಸುವುದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಒಂದೆಡೆ ಅಭಿವೃದ್ಧಿ ಇನ್ನೊಂದು ಗ್ಯಾರಂಟಿಗಳ ಅನುಷ್ಟಾನದಿಂದ ಸರ್ಕಾರ ಆದಾಯ ಕ್ರೋಢೀಕರಣಕ್ಕೆ ತೆರಿಗೆ ಹೆಚ್ಚಳ ಮಾಡಲೇಕಾದ ಸಂದಿಗ್ದತೆಯಲ್ಲಿದೆ.ಈ ನಿಟ್ಟಿನಲ್ಲಿ ಸರ್ಕಾರ ನೇರವಾಗಿ ಮದ್ಯಪ್ರಿಯರಿಗೆ ಬೆಲೆ ಏರಿಕೆ ಕಿಕ್ ಕೊಟ್ಟಿದೆ.ಸರ್ಕಾರ ಇಂದಿನಿAದ ಮದ್ಯದ ದರ ಹೆಚ್ಚಳ ಮಾಡಿದ್ದರೂ ಹಲವೆಡೆ ವೈನ್ ಶಾಪ್ ಹಾಗೂ ಬಾರ್ ಗಳಲ್ಲಿ ಗುರುವಾರ ರಾತ್ರಿಯಿಂದಲೇ ಹೆಚ್ಚುವರಿ ಹಣ ವಸೂಲಿ ಮಾಡಿದ ಘಟನೆಗಳೂ ನಡೆದಿವೆ.
ಈ ಬಾರಿಯ ಬಜೆಟ್‌ನಲ್ಲಿ ಬ್ರಾಂದಿ, ವಿಸ್ಕಿ, ಜಿನ್, ರಮ್ ಮತ್ತು ಇತರ ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಶೇ.20ರಷ್ಟುಏರಿಕೆ ಹಾಗೂ ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಶೇ.10ರಷ್ಟುಹೆಚ್ಚಿಸಿತ್ತು. ಹೀಗಾಗಿ ಹಾಲಿ ದರಕ್ಕೆ ಹೋಲಿಸಿದಾಗ ಶೇ.10ರಷ್ಟುಬಿಯರ್ ದರ ಹೆಚ್ಚಳವಾಗಲಿದೆ. ಇದರಿಂದ ಒಂದು ಪೆಗ್ (60 ಎಂಎಲ್) ಮದ್ಯದ ಬೆಲೆ ಗೆ .10-20 ಹೆಚ್ಚಳವಾಗುವ ಸಾಧ್ಯತೆಯಿದೆ.
ಪ್ರತಿ ರಟ್ಟಿನ ಪೆಟ್ಟಿಗೆಯ ಬೆಲೆ 450 ತನಕ ಇದ್ದರೆ ಅದರ ಅಬಕಾರಿ ಸುಂಕ 215 ರುಪಾಯಿ ಆಗಲಿದೆ. ಇದೇ ರೀತಿ, 450ರಿಂದ 499 ರೂ ತನಕದ ಮೌಲ್ಯದ ಪೆಟ್ಟಿಗೆ ಮೇಲಿನ ಅಬಕಾರಿ ಸುಂಕ 294 ರುಪಾಯಿ ಆಗಲಿದೆ. ಅದೇ ರೀತಿ 500 ರುಪಾಯಿಯಿಂದ 549 ರುಪಾಯಿ ತನಕದ ಪೆಟ್ಟಿಗೆಯ ಸುಂಕ 386 ರು. ಆಗಲಿದೆ. ಈ ರೀತಿ, 18 ಸ್ತರದಲ್ಲಿ ಅಬಕಾರಿ ಸುಂಕ ಹೆಚ್ಚಳವಾಗಿದೆ.