Share this news

ಕಾರ್ಕಳ: ಜೆಸಿಐ ವಲಯ 15ರ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಅವರು ಇಂದು ಸಂಜೆ ಮುಂಡ್ಕೂರು ಜೆಸಿಐಗೆ ಅಧಿಕೃತ ಭೇಟಿ ನೀಡಲಿದ್ದಾರೆ.

ಈ ಸಂದರ್ಭದಲ್ಲಿ ಜೆಸಿ ವಲಯ 15ರ ಉಪಾಧ್ಯಕ್ಷ ಜೆಸಿ ಸುಧಾಕರ ಆಚಾರ್ಯ ಉಪಸ್ಥಿತರಿರುವರು.
ಇಂದು ಸಂಜೆ 4 ಗಂಟೆಗೆ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ವಲಯಾಧ್ಯಕ್ಷರಿಗೆ ಸ್ವಾಗತ ಕಾರ್ಯಕ್ರಮ ನಡೆಯಲಿದ್ದು ಬಳಿಕ ದೇವರ ದರ್ಶನ ಪಡೆಯಲಿದ್ದಾರೆ. 4.30ಕ್ಕೆ ಕದ್ರಿ ಪಡವು ಜಂಕ್ಷನ್ ನಲ್ಲಿ ನಿರ್ಮಾಣಗೊಂಡಿರುವ ನಾಮಫಲಕ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.

ಸಂಜೆ 5:15ಕ್ಕೆ ಕಡಂದಲ ವಿದ್ಯಾಗಿರಿ ಜನವಸತಿ ಪ್ರದೇಶದಲ್ಲಿ ನಿರ್ಮಾಣ ಮಾಡಿರುವ ಹೈಮಾಸ್ಟ್ ದೀಪ ಉದ್ಘಾಟಿಸಲಿದ್ದು, 6 ಗಂಟೆಗೆ ಕಡಂದಲೆ ಪೂಪಾಡಿ ಕಲ್ ಎಂಬಲ್ಲಿ ನಿರ್ಮಾಣ ಮಾಡಿರುವ ಹೈಮಾಸ್ಟ್ ದೀಪದ ಉದ್ಘಾಟನೆ ನಡೆಯಲಿದೆ. ಬಳಿಕ 6:40ಕ್ಕೆ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ವಲಯ್ಯಾಧ್ಯಕ್ಷರು, ಸ್ಥಾಪಕಾಧ್ಯಕ್ಷರು, ಪೂರ್ವಾಧ್ಯಕ್ಷರು, ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ಸಭೆ ನಡೆಯಲಿದ್ದು 6:45 ಕ್ಕೆ ಸಭಾ ಕಾರ್ಯಕ್ರಮ ಆರಂಭಗೊಳ್ಳಲಿದೆ. ರಾತ್ರಿ 8.30ರಿಂದ ಸಹಭೋಜನ ನಡೆಯಲಿದೆ ಎಂದು ಜೆಸಿಐ ಮುಂಡ್ಕೂರ್ ಭಾರ್ಗವ ಪೂರ್ವ ಅಧ್ಯಕ್ಷರಾದ ಸುರೇಂದ್ರ ಭಟ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *