Share this news

ಬೆಂಗಳೂರು: ಕರ್ನಾಟಕ ಹೈಕೋರ್ಟ್​ನ  6 ಮಂದಿ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ  ಸಂದೇಶ ಬಂದಿದ್ದು, ಪಾಕಿಸ್ತಾನ ಮೂಲದ ಉಗ್ರರ ಕೈವಾಡವೇ ಎಂಬ ಶಂಕೆ ವ್ಯಕ್ತವಾಗಿದೆ. ಹಣಕ್ಕಾಗಿ ಬೇಡಿಕೆ ಇಟ್ಟಿರುವ ದುಷ್ಕರ್ಮಿಗಳು, ಇದನ್ನು ಈಡೇರಿಸದಿದ್ದರೆ ಕೊಲೆ ದುಬೈ ಗ್ಯಾಂಗ್​ನಿಂದ ಕೊಲೆ ಮಾಡಿಸುವುದಾಗಿ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ಹೈಕೋರ್ಟ್​ನ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ. ಮುರಳೀಧರ್​ಗೆ ಸಂದೇಶ ಬಂದಿದೆ.

50 ಲಕ್ಷ ರೂಪಾಯಿ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು ಎಂದು ಬೇಡಿಕೆ ಇಡಲಾಗಿದ್ದು, ಪಾಕಿಸ್ತಾನ ಮೂಲದ ಬ್ಯಾಂಕ್​ ಖಾತೆ ನಂಬರ್ ನೀಡಿದ್ದಾರೆ. ಅಲೈಡ್​​ ಬ್ಯಾಂಕ್ ಲಿಮಿಟೆಡ್​ನ‌ ಖಾತೆಯ ಸಂಖ್ಯೆಯನ್ನು ದುಷ್ಕರ್ಮಿಗಳು ನೀಡಿದ್ದಾರೆ. ಕೊಲೆ ಮಾಡಿಸುವುದಾಗಿ ವಾಟ್ಸ್​ಆ್ಯಪ್ ಮೂಲಕವೂ ಬೆದರಿಕೆ ಸಂದೇಶ ಕಳುಹಿಸಲಾಗಿದೆ.

ಬೆದರಿಕೆ ಸಂಬಂಧ ಸೆಂಟ್ರಲ್ ಕ್ರೈಮ್ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿದೆ. ವಾಟ್ಸ್​ಆ್ಯಪ್ ಸಂದೇಶದ ಆಧರಿಸಿ ಎಫ್​ಐಆರ್​ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *