ಕಾರವಾರ: ಗ್ರಾಮಸ್ಥರು ಪಂಜುರ್ಲಿ ಎಂದು ಪೂಜೆ ಮಾಡುತ್ತಿದ್ದ ಕಾಡು ಹಂದಿಯನ್ನು ಕೋಳಿ ಮಾಂಸದಲ್ಲಿ ನಾಡಬಾಂಬ್ ಇಟ್ಟು ಹತ್ಯೆ ಮಾಡಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಚಂಡಿಯಾ ಗ್ರಾಮದಲ್ಲಿ ನಡೆದಿದೆ.
ಕಾಡು ಹಂದಿ ಊರ ಜನರು ನೀಡುತ್ತಿದ್ದ ಆಹಾರವನ್ನು ಸೇವಿಸುತ್ತಾ ಇಡೀ ಗ್ರಾಮದಲ್ಲಿ ಜನರ ಪ್ರೀತಿಗೆ ಪಾತ್ರವಾಗಿತ್ತು. ಕಾಂತಾರ ಸಿನಿಮಾ ನಂತರ ಈ ಕಾಡು ಹಂದಿಯನ್ನು ಜನರು ಪಂಜುರ್ಲಿ ಎಂದು ದೈವದ ಸ್ಥಾನ ಕೊಟ್ಟು ಪೂಜಿಸಿ ಪಂಜರ್ಲಿ ಎಂದೇ ಕರೆಯುತ್ತಿದ್ದರು.
ಆದರೆ ಆ.5ರ ತಡರಾತ್ರಿ ಯಾರೋ ದುಷ್ಕರ್ಮಿಗಳು ಕೋಳಿಮಾಂಸದಲ್ಲಿ ನಾಡ ಬಾಂಬ್ ಇಟ್ಟು ಪಂಜುರ್ಲಿ ಕಾಡಹಂದಿಯನ್ನು ಹತ್ಯೆ ಮಾಡಿದ್ದಾರೆ. ಇದರಿಂದ ಬೇಸರಗೊಂಡಿರುವ ಗ್ರಾಮಸ್ಥರು ಕಾರವಾರ ಅರಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.