ಕಾರ್ಕಳ: ನಿಟ್ಟೆ ಗ್ರಾಮದ ಗುಂಡ್ಯಡ್ಕ ಎಂಬಲ್ಲಿನ ಕಲ್ಲುಕೋರೆಯಲ್ಲಿ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೇ ಸ್ಪೋಟ ನಡೆಸಿದ ಪರಿಣಾಮ ಕಲ್ಲು ಸಿಡಿದು ಕಾರ್ಮಿಕ ಮೃತಪಟ್ಟ ಪ್ರಕರಣಕ್ಕೆ ಸಂಬAಧಿಸಿದAತೆ ಕ್ರಶರ್ ಮಾಲಕ ದಿನೇಶ್ ಶೆಟ್ಟಿ ಹಾಗೂ ಸ್ಪೋಟ ನಡೆಸಿದ ಮಣಿಪಾಲದ ಬಾಲಾಜಿ ಎಕ್ಸ್ಪ್ಲೋಸಿವ್ ಕಂಪೆನಿಯ ಯತೀಶ್ ಕುಮಾರ್ ದೇವಾಡಿಗ ಎಂಬವರ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಗಸ್ಟ್ 1ರಂದು ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಗುಂಡ್ಯಡ್ಕ ದಿನೇಶ ಶೆಟ್ಟಿ ಎಂಬವರ ಮಾಲಕತ್ವದ ಮಹಾಗಣಪತಿ ಕ್ರಶರ್ ನಲ್ಲಿ ಸ್ಪೋಟಕಗಳನ್ನು ಬಳಸಿ ಕಲ್ಲುಬಂಡೆಗಳನ್ನು ತೆಗೆಯಲು ಸ್ಪೋಟ ನಡೆಸಿದಾಗ ಸ್ಪೋಟದಿಂದ ಸಿಡಿದ ಕಲ್ಲು ಅನತಿದೂರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ವೆಂಕಟೇಶ್ ಅವರ ತಲೆಗೆ ಬಡಿದಾಗ ಅವರು ತೀವೃವಾಗಿ ಗಾಯಗೊಂಡು ಆಸ್ಪತ್ರೆ ಸಾಗಿಸುವ ವೇಳೆ ಮೃತಪಟ್ಟಿದ್ದರು. ಕ್ರಶರ್ ಮಾಲಕ ಹಾಗೂ ಸ್ಪೋಟ ನಡೆಸಿದ ಕಂಪೆನಿಯ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಪರಿಣಾಮವಾಗಿ ಬಾಗಲಕೋಟೆ ಮೂಲದ ಕಾರ್ಮಿಕ ವೆಂಕಟೇಶ್ ಕಲ್ಲು ಸಿಡಿದು ಮೃತಪಟ್ಟಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.
ಘಟನೆ ನಡೆದ ತಕ್ಷಣವೇ ವೆಂಕಟೇಶ್ ಕಾಲುಜಾರಿಬಿದ್ದು ಬಂಡೆ ತಗುಲಿ ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿಸ್ತçತ ತನಿಖೆ ನಡೆಸಿದಾಗ ಗಣಿಗಾರಿಕೆಯ ಸ್ಪೋಟದಿಂದಲೇ ಕಲ್ಲು ಸಿಡಿದು ವೆಂಕಟೇಶ್ ಮೃತಪಟ್ಟಿದ್ದಾರೆ ಎನ್ನುವ ಅಂಶ ಬೆಳಕಿಗೆ ಬಂದಿದೆ. ಸ್ಪೋಟ ನಡೆಸುವಾಗ ಕಾರ್ಮಿಕ ಸುರಕ್ಷತೆಯ ಬಗ್ಗೆ ಗಮನಹರಿಸದೇ ನಿರ್ಲಕ್ಷö್ಯ ತೋರಿದ ಕ್ರಶರ್ ಮಾಲಕ ದಿನೇಶ್ ಶೆಟ್ಟಿ ಹಾಗೂ ದ ಬಾಲಾಜಿ ಎಕ್ಸ್ಪ್ಲೋಸಿವ್ ಕಂಪೆನಿಯ ಯತೀಶ್ ಕುಮಾರ್ ದೇವಾಡಿಗ ವಿರುದ್ಧ ಕೇಸ್ ದಾಖಲಾಗಿದೆ
ಪೊಲೀಸರ ಕ್ರಮಕ್ಕೆ ಸಾರ್ವಜನಿಕರ ಪ್ರಶಂಸೆ:
ಗಲ್ಲುಗಣಿಗಾರಿಕೆಯಲ್ಲಿ ಸ್ಪೋಟ ನಡೆಸುವ ಸಂದರ್ಭದಲ್ಲಿ ನಿರ್ಲಕ್ಷö್ಯದ ಪರಿಣಾಮ ಹೊಟ್ಟೆಪಾಡಿಗಾಗಿ ಕ್ರಶರ್ ನಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಅಮಾಯಕ ವೆಂಕಟೇಶ್ ದಾರುಣವಾಗಿ ಮೃತಪಟ್ಟ ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ ಈ ಪ್ರಕರಣದಲ್ಲಿ ತಪ್ಪಿತಸ್ಥ ಕ್ರಶರ್ ಮಾಲಕ ಹಾಗೂ ಸ್ಪೋಟ ನಡೆಸಿದ ಕಂಪೆನಿಯ ವಿರುದ್ಧ ಕೇಸ್ ದಾಖಲಿಸಿರುವ ಪೊಲೀಸರ ಕ್ರಮಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕಾರ್ಕಳ ತಾಲೂಕಿನಲ್ಲಿ ಅವ್ಯಾಹತ ಗಣಿಗಾರಿಕೆಯಿಂದ ಸಾಕಷ್ಟು ಮನೆಗಳಿಗೆ,ಕೃಷಿ ಭೂಮಿ ಹಾಗೂ ಸಾರ್ವಜನಿಕ ಓಡಾಟದ ರಸ್ತೆಗಳಿಗೆ ಹಾನಿಯಾಗುತ್ತಿದ್ದು ಅಂತಹ ಕ್ರಶರ್ ಗಳ ವಿರುದ್ಧ ಹೋರಾಟಗಳು ನಡೆದಿದ್ದು, ನಿಯಮಬಾಹಿರ ಕಲ್ಲುಗಣಿಗಾರಿಕೆ ಹಾಗೂ ಕ್ರಶರ್ ಗಳ ವಿರುದ್ದ ಪೊಲೀಸರು ಹಾಗೂ ಗಣಿ ಹಾಗೂ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕೆಂದು ಜನರು ಒತ್ತಾಯಿಸಿದ್ದಾರೆ.