Share this news

ಕಾರ್ಕಳ: ಜ್ಯೋತಿ ಯುವಕ ಮತ್ತು ಜ್ಯೋತಿ ಮಹಿಳಾ ಮಂಡಲ(ರಿ) ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಆಟಿಯ ಆಹಾರೋತ್ಸವ ಕಾರ್ಯಕ್ರಮ ಕಾಳಿಕಾಂಬ ಜ್ಯೋತಿ ಮೈದಾನದಲ್ಲಿ ಜರುಗಿತು.

ಮುಖ್ಯ ಅಥಿತಿಯಾಗಿ ಭಾಗವಹಿಸಿದ ಮುನಿಯಾಲು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಬೇಬಿ ಆಳ್ವ ಚೆನ್ನಮಣಿ ಆಟವಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ನಿಸ್ವಾರ್ಥ ಸೇವೆ ಸಲ್ಲಿಸುವ ಸಕ್ರೀಯ ಸದಸ್ಯರಿಂದ ಮಾತ್ರ ಯುವಕ ಮಂಡಲಗಳು ಬೆಳೆದು ನಿಂತಿವೆ, ಸಮಾಜಕ್ಕೆ ಸ್ಪಂದಿಸುವ ಬಹುದೊಡ್ಡ ಜವಾಬ್ದಾರಿ ಯುವಕ ಮಂಡಲಗಳಿಗೆ ಇದೆ ಎಂದರು.

ಆಟಿ ಕಳಂಜ ಸಾಮಾಜಿಕ ನ್ಯಾಯದ ಪ್ರತೀಕ, ಆಟಿ ತಿಂಗಳಲ್ಲಿ ಕಷ್ಟ ಬದುಕು ಕಟ್ಟಿಕೊಂಡವರಿಗೆ ಮಾನಸಿಕ ದೈರ್ಯ ತುಂಬಲು ಅವನು ಬರುತ್ತಾನೆ ಎಂಬುದು ನಂಬಿಕೆ, ಮನೆ ಮನೆ ತಿರುಗಿ ಇದ್ದವರಿಂದ ಪಡೆದು ಇಲ್ಲದವರಿಗೆ ನೀಡಿ ಹಂಚಿ ತಿನ್ನಿಸುವುದೇ ಅವನ ವಿಷೇಶತೆ ಎಂದು ಹೇಳಿದರು.

ಈ ಸಂದರ್ಭ ಮಂಡಲದ ಸದಸ್ಯರೇ ತಯಾರಿಸಿದ ಸುಮಾರು 35 ಬಗೆಯ ಆಟಿಯ ವಿಷೇಶ ಆಹಾರ ತಿನಸುಗಳನ್ನು ಉಣ ಬಡಿಸಲಾಯಿತು.

ಮಹಿಳಾ ಮಂಡಲದ ಗೌರವಾದ್ಯಕ್ಷೆ ಯಶ, ಯುವಕ ಮಂಡಲದ ಅದ್ಯಕ್ಷ ಸುಧಾಕರ್ ಕೊಟ್ಯಾನ್, ಮಹಿಳಾ ಮಂಡಲದ ಅದ್ಯಕ್ಷೆ ದಿವ್ಯಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶುಭದರಾವ್ ಪ್ರಾಸ್ತಾವಿಕ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು ರಶ್ಮಿ ಕಾರ್ಯಕ್ರಮನ್ನು ನಿರೂಪಿಸಿ, ಸುಖೇಶ್ ಕೋಟ್ಯಾನ್ ಧನ್ಯವಾದವಿತ್ತರು.

Leave a Reply

Your email address will not be published. Required fields are marked *