ಕಾರ್ಕಳ:ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮತ್ತೆ ಚುರುಕು ಪಡೆದುಕೊಂಡಿದ್ದು ಹಲವೆಡೆ ಭಾರೀ ಗಾಳಿಮಳೆಗೆ ಕಾರ್ಕಳ ತಾಲೂಕಿನ ಪುರಸಭಾ ವ್ಯಾಪ್ತಿಯ ಭುವನೇಂದ್ರ ಕಾಲೇಜು ಬಳಿ ನಿವಾಸಿ ಜಯರಾಜ್ ಎಂಬವರ ಮನೆಗೆ ಮರಬಿದ್ದ ಪರಿಣಾಮ ಮೇಲ್ಛಾವಣಿಗೆ ಹಾನಿಯಾಗಿ 50 ಸಾವಿರ ರೂ ನಷ್ಟ ಸಂಭವಿಸಿದೆ.
ಶುಕ್ರವಾರ ಮಧ್ಯಾಹ್ನ ಬೀಸಿದ ಭಾರೀ ಗಾಳಿಗೆ ಎರ್ಲಪಾಡಿ ಗ್ರಾಮದ ವಸಂತಿ ಹಾಂಡ ಎಂಬವರ ಮನೆಯ ಸಿಮೆಂಟ್ ಶೀಟ್ ಹಾರಿ ಹೋಗಿದ್ದು 10 ಸಾವಿರ ರೂ ನಷ್ಟ ಸಂಭವಿಸಿದೆ.