ಕಾರ್ಕಳ:ಮಂಗಳವಾರ ರಾತ್ರಿ ಮಳೆ ಸಹಿತ ಭಾರೀ ಗಾಳಿಗೆ ಕಾರ್ಕಳ ತಾಲೂಕಿನ ಹಲವೆಡೆ ಮನೆಗಳಿಗೆ ಮರಬಿದ್ದು ಭಾರೀ ಹಾನಿ ಸಂಭವಿಸಿದೆ
ತಾಲೂಕಿನ ಕಣಜಾರು ಗ್ರಾಮದ ಕಲ್ಯಾಣಿ ನಾಯಕ್ ಎಂಬವರ ಮನೆಗೆ ಹಾನಿಯಾಗಿ 20,000 ನಷ್ಟ ಸಂಭವಿಸಿದೆ. ದುರ್ಗಾ ಗ್ರಾಮದ ಮಲೆಬೆಟ್ಟು ಎಂಬಲ್ಲಿನ ತನಿಯಪ್ಪ ಮೇರಾ ಎಂಬವರ ಮನೆಗೆ ಮರ ಬಿದ್ದು 30,000 ನಷ್ಟ ಸಂಭವಿಸಿದೆ. ನಲ್ಲೂರು ಗ್ರಾಮದ ಕೊಯನಡ್ಕ ರಾಮ ಸಾಲಿಯಾನ್ ಎಂಬವರ ಮನೆಗೆ ತೆಂಗಿನ ಮರ ಬಿದ್ದು 20,000 ರೂ. ನಷ್ಟವಾಗಿದೆ ರೆಂಜಾಳ ಗ್ರಾಮದ ಕೊಂಬೆಟ್ಟು ಸುಭಾಷ್ ಚಂದ್ರ ಜೈನ್ ಎಂಬವರ ಮನೆಯ ಮೇಲೆ ಮರ ಬಿದ್ದು ಸುಮಾರು 20 ಸಾವಿರ ರೂ ನಷ್ಟ ಸಂಭವಿಸಿದೆ.