ಕಾರ್ಕಳ : ಪಡಿ ಸಂಸ್ಥೆ ಮಂಗಳೂರು, ಪುರಸಭೆ ಕಾರ್ಕಳ, ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ (ರಿ )ಉಡುಪಿ, ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರ ಕಾರ್ಕಳ ಹಾಗೂ ಜೆ. ಸಿ. ಐ ಕಾರ್ಕಳ ಗ್ರಾಮಾಂತರ ಇವರ ಜಂಟೀ ಸಹಭಾಗಿತ್ವದಲ್ಲಿ ಶಿಕ್ಷಣ ಹಕ್ಕು ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಮಕ್ಕಳ ಧ್ವನಿಗೆ ಧ್ವನಿಯಾಗೋಣ ಅಭಿಯಾನ -2023 ರ ಕಾರ್ಯಕ್ರಮವು ಕಾರ್ಕಳ ಕಾಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜುಲೈ.12ರಂದು ನಡೆಯಿತು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಅಬ್ದುಲ್ ಆರೀಸ್ ಅಧ್ಯಕ್ಷತೆ ವಹಿಸಿದ್ದರು. ಪಡಿ ಸಂಸ್ಥೆಯ ಶ್ರೀಮತಿ ಶೋಭಾ ಭಾಸ್ಕರ್, ವಿಜಯ ಕುಮಾರಿ, ತರಬೇತಿ ಸಂಯೋಜಕ ವಿವೇಕ್, ರೇಷ್ಮಾ ಹಾಗೂ ಶಿಕ್ಷಣ ಇಲಾಖೆಯ ರವಿಚಂದ್ರ ಕಾರಂತ್, ಪೊಲೀಸ್ ಇಲಾಖೆಯ ಸಂತೋಷ್, ಜೆ.ಸಿ.ಐ ಸಂಸ್ಥೆಯ ಮಂಜುನಾಥ್ ಕೋಟ್ಯಾನ್,ಶಾಲಾ ಮುಖ್ಯ ಶಿಕ್ಷಕಿ ಜೇಸಿಂತಾ ಡೇಸಾ, ಕಾಬೆಟ್ಟು ಪ್ರೌಢ ಶಾಲೆಯ ಹಿರಿಯ ಶಿಕ್ಷಕಿ ಶ್ರೀಮತಿ ಸುಮಾ, ಪುರಸಭೆಯ ಸದಸ್ಯೆ ಶ್ರೀಮತಿ ರೆಹಮತ್ ಮತ್ತು ಶ್ರೀಮತಿ ಪ್ರಭಾ, ಶಾಲಾ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಹರೀಶ್ ಶೆಣೈ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮಕ್ಕಳು ಉಪಸ್ಥಿತರಿದ್ದರು.
ಅಮ್ಮನ ನೆರವು ಟ್ರಸ್ಟ್ ಸಂಚಾಲಕ ಅವಿನಾಶ್ ಶೆಟ್ಟಿ ಮಕ್ಕಳಿಗೆ ನೋಟ್ ಪುಸ್ತಕವನ್ನು ವಿತರಿಸಿದರು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಕೆ ನರೇಂದ್ರ ಕಾಮತ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಹಾಗೂ ಮಕ್ಕಳ ಮೇಲೆ ನಡೆಸುವ ಲೈಂಗಿಕ ದೌರ್ಜನ್ಯ ಹಾಗೂ ಅದರಿಂದ ರಕ್ಷಣೆ ಪಡೆಯುವ ಬಗ್ಗೆ ವಿಡಿಯೋ ಮೂಲಕ ತೋರಿಸಿ ಮಕ್ಕಳಿಗೆ ಶಿಕ್ಷಣ ನೀಡಲಾಯಿತು. ಶಿಕ್ಷಕರ ಹಾಗೂ ಪಡಿ ಸಂಸ್ಥೆಯ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.