ಕಾರ್ಕಳ : ಪಲ್ಲವಿ ಕಲಾವಿದೆರ್ ಕಾರ್ಕಳ ಇವರಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ “ಕಲಾಬ್ರಹ್ಮ” ದಿನೇಶ್ ಪ್ರಭು ಕಲ್ಲೊಟ್ಟೆ ನೇತೃತ್ವದಲ್ಲಿ ಪ್ರಶಾಂತ್ ಪರಪ್ಪಾಡಿ ರಚಿಸಿರುವ ,ಭವಾನಿ ಪೇರಡ್ಕ ನಿರ್ದೇಶನದ ಸದಾನಂದ ನಾಯ್ಕ ದುರ್ಗ ಅಭಿನಯದಲ್ಲಿ “ಹಲೋ ಮೊಬೈಲ್ ಬೊಡ ಬೊಡ್ಚ?” ಎಂಬ ತುಳು ನಾಟಕದ ಮುಹೂರ್ತ ಕಾರ್ಯಕ್ರಮವು ಕಾಬೆಟ್ಟು ಚೋಲ್ಪಾಡಿ ಶ್ರೀ ವೇಣುಗೋಪಾಲ ಕೃಷ್ಣ ದೇವಸ್ಥಾನ ದೇವರ ಸನ್ನಿಧಾನದಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ಉದ್ಯಮಿ ಅಜೆಕಾರು ವಿಜಯ್ ಶೆಟ್ಟಿ ,ಸುಧೀಂದ್ರಶಾAತಿ, ವೇಣುಗೋಪಾಲ ಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ ಉಪಾಧ್ಯಾಯ ,ದಿನೇಶ್ ಪ್ರಭು ಕಲ್ಲೊಟ್ಟೆ, ಪ್ರಕಾಶ್ ಪ್ರಭು, ವಿನಾಯಕ ಪ್ರಭು , ಪ್ರಶಾಂತ್ ಶೆಟ್ಟಿ, ಸುಮಲತ ಕರಿಮಾರ್ ಕಟ್ಟೆ ಹಾಗೂ ಪಲ್ಲವಿ ಕಲಾವಿದೆರ್ ತಂಡದ ಕಲಾವಿದರು ಉಪಸ್ಥಿತರಿದ್ದರು.