Share this news

ಹೊಸದಿಲ್ಲಿ : ಭಾರತದ ಮಹತ್ವಾಕಾಂಕ್ಷಿ ಯೋಜನೆ ಯಾದ ಚಂದ್ರಯಾನ- 3 ಬಾಹ್ಯಾಕಾಶ ನೌಕೆಯ ಕಕ್ಷೆ ಎತ್ತರಿಸುವ ಎರಡನೇ ಹಂತದ ಪ್ರಕ್ರಿಯೆಯನ್ನು ಸೋಮವಾರ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.
ಇದರ ಬಳಿಕ ಈಗ ಬಾಹ್ಯಾಕಾಶ ನೌಕೆಯು 41,603 ಕಿ.ಮೀ * 226 ಕಿಲೋಮೀಟರ್ ಕಕ್ಷೆಯಲ್ಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಹೇಳಿದೆ.

ಮಂಗಳವಾರ ಅಪರಾಹ್ನ ಎರಡು ಮತ್ತು ಮೂರು ಗಂಟೆಯ ನಡುವೆ ಮುಂದಿನ ಹಂತದ ಕಕ್ಷೆ ಎತ್ತರಿಸುವ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದೆ . ಅದಾದ ಬಳಿಕ ಮತ್ತೆರಡು ಬಾರಿ ಇಂಥದ್ದೇ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಈ ಮೂಲಕ ಬಾಹ್ಯಾಕಾಶ ನೌಕೆಯು ಭೂಮಿಯ ಗುರುತ್ವ ಬಲದಿಂದ ಹೊರಹೋಗಿ ಚಂದ್ರನತ್ತ ಪ್ರಯಾಣಿಸುವಂತೆ ಮಾಡಲಾಗುತ್ತದೆ ಎಂದು ಇಸ್ರೋ ಹೇಳಿದೆ .
ಜುಲೈ 14ರಂದು ಚಂದ್ರಯಾನ-3 ನೌಕೆಯು ಆಂಧ್ರದ ಶ್ರೀಹರಿಕೋಟದಿಂದ ನಭಕ್ಕೆ ಚಿಮ್ಮಿತ್ತು.

Leave a Reply

Your email address will not be published. Required fields are marked *