ಜಮ್ಮು ಕಾಶ್ಮೀರ : ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಸೇನೆಯ ಕಣ್ತಪ್ಪಿಸಿ ಒಳನುಸುಳಲು ಯತ್ನಿಸಿದ ಇಬ್ಬರು ಭಯೋತ್ಪಾದಕರನ್ನು ಭಾರತೀಯ ಯೋಧರು ಹತ್ಯೆಗೈದಿದ್ದಾರೆ.
ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರ ಜಂಟಿ ಕರ‍್ಯಾಚರಣೆ ವೇಳೆ ಭಯೋತ್ಪಾದಕರು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ .ಈ ವೇಳೆ ಪ್ರತಿ ದಾಳಿ ನಡೆಸಿದ ಸೇನೆ ಇಬ್ಬರು ಉಗ್ರರನ್ನು ಸದೆಬಡಿದಿದೆ.
ಗಡಿಯಲ್ಲಿ ಶೋಧ ಕರ‍್ಯಾಚರಣೆ ಮುಂದುವರಿದಿದ್ದು ಈ ಕುರಿತು ಟ್ವೀಟ್ ಮಾಡಿದ ಕಾಶ್ಮೀರ ಪೊಲೀಸರು ಪೂಂಚ್ ಸೆಕ್ಟರ್ ನಲ್ಲಿ ಆಪರೇಷನ್ ಜುಲೈ 16ರ ರಾತ್ರಿ ಕರ‍್ಯಾಚರಣೆ ನಡೆಸಿದ ವೇಳೆ ಗಡಿಯ ಒಳಗೆ ನುಸುಳಲು ಯತ್ನಿಸುತ್ತಿದ್ದ ಇಬ್ಬರು ಉಗ್ರರನ್ನು ಹತ್ಯೆಗಯ್ಯಲಾಗಿದೆ ಜೊತೆಗೆ ಅವರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.