ಮೂಡಬಿದಿರೆ: ತಾಲೂಕು ಕಚೇರಿ ಮೂಡಬಿದ್ರೆ ಮತ್ತು ಆಧಾರ್ ಸೇವಾಕೇಂದ್ರ ಮಂಗಳೂರು ಇವರ ಸಹಯೋಗದಲ್ಲಿ ಜುಲೈ 17 ರಿಂದ 28 ರವರೆಗೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ 11 ದಿನಗಳ ಮೂಡುಬಿದ್ರೆ ತಾಲೂಕು ಕಚೇರಿಯ ಸಭಾಂಗಣದಲ್ಲಿ ಆಧಾರ್ ಶಿಬಿರ ನಡೆಯಲಿದೆ.
ಆಧಾರ್ ಶಿಬಿರದಲ್ಲಿ ಲಭ್ಯವಿರುವ ಸೇವೆಗಳು ಈ ಕೆಳಗಿನಂತಿವೆ:
ಹೊಸ ಆಧಾರ್ ಕಾರ್ಡ್
◻️ ಜನನ ಪ್ರಮಾಣ ಪತ್ರ
◻️ತಂದೆ/ತಾಯಿಯ ಆಧಾರ್ ಕಾರ್ಡ್
ಶುಲ್ಕ: ಉಚಿತ
ಬಯೋಮೆಟ್ರಿಕ್ ಹಾಗೂ ವಿಳಾಸ ತಿದ್ದುಪಡಿ
◻️ 5 ವರ್ಷ ಮೇಲ್ಪಟ್ಟ ಹಾಗೂ 15 ವರ್ಷ ಮೇಲ್ಪಟ್ಟ ಕಡ್ಡಾಯ ಬಯೋಮೆಟ್ರಿಕ್.
◻️ಬಯೋಮೆಟ್ರಿಕ್ ನೊಂದಿಗೆ ವಿಳಾಸ ತಿದ್ದುಪಡಿ
ಶುಲ್ಕ: 5ರಿಂದ 7 ವರ್ಷದ ಮಕ್ಕಳಿಗೆ ಉಚಿತ *15 ರಿಂದ 17 ವರ್ಷದ ಮಕ್ಕಳಿಗೆ ಉಚಿತ * ಇತರರಿಗೆ ಶುಲ್ಕ 100/-
ಇತರ ತಿದ್ದುಪಡಿ
◻️ತಂದೆ/ತಾಯಿ/ಗಂಡನ ಹೆಸರು
◻️ಜನ್ಮ ದಿನಾಂಕ
◻️ವಿಳಾಸ ತಿದ್ದುಪಡಿ
◻️ಲಿಂಗ
◻️ಮೊಬೈಲ್ ಸಂಖ್ಯೆ
◻️E-Mail
ಶುಲ್ಕ: ₹ 50
◻️ ಪೋಟೊ ತಿದ್ದುಪಡಿ
ಶುಲ್ಕ: ₹100
◻️ ಎಲ್ಲಾ ಸರ್ಕಾರಿ ಯೋಜನೆಗಳನ್ನು ಪಡೆಯಲು 10 ವರ್ಷ ಮತ್ತು ಅದಕ್ಕೂ ಮೀರಿದ ಆಧಾರ್ ಹೊಂದಿರುವವರು ಕಡ್ಡಾಯವಾಗಿ ಬಯೋಮೆಟ್ರಿಕ್ ಅಪ್ಡೇಟ್ ಮಾಡತಕ್ಕದ್ದು .
▫️ಮತದಾರರ ಗುರುತಿನ ಚೀಟಿ
▫️ಪಡಿತರ ಚೀಟಿ
▫️ಪಾಸ್ ಪೋರ್ಟ್
ಬಯೋಮೆಟ್ರಿಕ್ ಅಪ್ಡೇಟ್ ಶುಲ್ಕ:-100
ಐಡೆಂಟಿಟಿ ಅಪ್ಡೇಟ್ ಶುಲ್ಕ:-50
ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿಸಲಾಗಿದೆ