Share this news

ವಾರಣಾಸಿ: ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ ಎಎಸ್‌ಐ ಸಮೀಕ್ಷೆಗೆ ಸಂಬAಧಿಸಿದAತೆ ಅಲಹಾಬಾದ್ ಹೈಕೋರ್ಟ್ ಇಂದು ಮಹತ್ವದ ತೀರ್ಪು ನೀಡಲಿದೆ.

ಅಲಹಾಬಾದ್ ಹೈಕೋರ್ಟ್ ಜುಲೈ 27 ರಂದು ಎರಡೂ ಕಡೆಯ ವಿಚಾರಣೆಯ ನಂತರ ತೀರ್ಪನ್ನು ಕಾಯ್ದಿರಿಸಿತ್ತು. ಇಂದು (ಗುರುವಾರ) ಮಧ್ಯಾಹ್ನ 2 ಗಂಟೆಗೆ ಈ ವಿಷಯದ ಬಗ್ಗೆ ತೀರ್ಪು ಬರಲಿದೆ.


ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಿತಿಂಕರ್ ದಿವಾಕರ್ ವಿಚಾರಣೆ ಪೂರ್ಣಗೊಳಿಸಿದ್ದರು. ವಿಚಾರಣೆ ಮುಗಿದ ಬಳಿಕ ಆಗಸ್ಟ್ 3ರಂದು ತೀರ್ಪು ಪ್ರಕಟಿಸಲಿದ್ದು, ಅಲ್ಲಿಯವರೆಗೆ ಸಮೀಕ್ಷೆಗೆ ತಡೆ ನೀಡುವುದಾಗಿ ಹೇಳಿದ್ದರು. ಜ್ಞಾನವಾಪಿ ಸಮೀಕ್ಷೆ ಪ್ರಕರಣಕ್ಕೆ ಸಂಬAಧಿಸಿದAತೆ ಹೈಕೋರ್ಟ್ನಲ್ಲಿ ನಡೆದ ವಿಚಾರಣೆ ವೇಳೆ ದೇವಸ್ಥಾನ ಹಾಗೂ ಮಸೀದಿ ಕಡೆಯಿಂದ ತೀವ್ರ ವಾಗ್ವಾದ ನಡೆಯಿತು. ಕಾನೂನು ಹಾಗೂ ಐತಿಹಾಸಿಕ ಸಂಗತಿಗಳನ್ನು ಇರಿಸಲಾಗಿತ್ತು. ವಿಚಾರಣೆಯ ಪ್ರಾರಂಭದಲ್ಲಿ, ಮುಖ್ಯ ನ್ಯಾಯಾಧೀಶರ ಪ್ರಶ್ನೆಗೆ, ಭಾರತೀಯ ಪುರಾತತ್ವ ಇಲಾಖೆ ಹೆಚ್ಚುವರಿ ನಿರ್ದೇಶಕರು ನ್ಯಾಯಾಲಯಕ್ಕೆ ತಿಳಿಸಿದರು, ಎಎಸ್‌ಐ ಯಾವುದೇ ಭಾಗವನ್ನು ಉತ್ಖನನ ಮಾಡಲು ಹೋಗುವುದಿಲ್ಲ.

ಉತ್ಖನನ ಎಂದರೆ ಏನು ಎಂದು ಮುಖ್ಯ ನ್ಯಾಯಮೂರ್ತಿ ಕೇಳಿದ್ದರು. ಡೇಟಿಂಗ್ ಮತ್ತು ಪುರಾತತ್ವ ಚಟುವಟಿಕೆಗಳಿಗೆ ಸಂಬAಧಿಸಿದ ಯಾವುದೇ ಚಟುವಟಿಕೆಯನ್ನು ಉತ್ಖನನ ಎಂದು ಕರೆಯಲಾಗುತ್ತದೆ, ಆದರೆ ನಾವು ಸ್ಮಾರಕದ ಯಾವುದೇ ಭಾಗವನ್ನು ಅಗೆಯಲು ಹೋಗುವುದಿಲ್ಲ ಎಂದು ಅಧಿಕಾರಿ ಉತ್ತರಿಸಿದರು. ಎಲ್ಲಾ ಕಕ್ಷಿದಾರರ ವಾದವನ್ನು ಆಲಿಸಿದ ನ್ಯಾಯಾಲಯ ತನ್ನ ತೀರ್ಪನ್ನು ಆಗಸ್ಟ್ 3ಕ್ಕೆ ಕಾಯ್ದಿರಿಸಿತ್ತು. ನಿರ್ಧಾರ ಕೈಗೊಳ್ಳುವವರೆಗೂ ಎಎಸ್‌ಐ ಸಮೀಕ್ಷೆಯ ಮೇಲಿನ ನಿಷೇಧ ಹಾಗೆಯೇ ಇರುತ್ತದೆ ಎಂದು ನ್ಯಾಯಾಲಯ ಹೇಳಿತ್ತು.

Leave a Reply

Your email address will not be published. Required fields are marked *