Share this news

ಬೆಂಗಳೂರು: ರೈತರ ಹೆಸರಿನಲ್ಲಿ ಕೋಟ್ಯಂತರ ಹಣ ಲೂಟಿ ಮಾಡಲಾಗಿದೆ. ನೈಸ್ ಹಗರಣ ಕುರಿತು ಎಲ್ಲಾ ದಾಖಲೆ ಸಂಗ್ರಹ ಮಾಡಿದ್ದೇನೆ. ದೆಹಲಿಯಲ್ಲಿ ಹಗರಣದ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ವರ್ಗಾವಣೆ ಬಗ್ಗೆ ಮಾತನಾಡಲು ನನಗೆ ಅಸಹ್ಯವಾಗುತ್ತೆ. ಬಿಡಿಎ ಸಂಬAಧಿಸಿದ ಗಲಾಟೆ ನನ್ನಿಂದ ಶುರುವಾಗಿತ್ತಾ? ವರ್ಗಾವಣೆಯಲ್ಲಿ ನಾನು ಯಾವುದಕ್ಕೆ ಹಸ್ತಕ್ಷೇಪ ಮಾಡಿದ್ದೇನೆ? ಎಂದು ಪ್ರಶ್ನಿಸಿದರು. ವರ್ಗಾವಣೆಯಲ್ಲಿ ಒಂದು ಸಾವಿರ ಕೋಟಿಗಿಂತ ಅಧಿಕ ಹಣ ಸಂಗ್ರಹ ಮಾಡಿದ್ದಾರೆ. ಒಂದೊAದು ಪೋಸ್ಟ್ಗೆ ಮೂರು ನಾಲ್ಕು ಜನರಿಗೆ ಲೆಟರ್ ಕೊಟ್ಟಿದ್ದಾರೆ. ಬಿಬಿಎಂಪಿ ಗುತ್ತಿಗೆದಾರರಿಗೆ ಮೇನಲ್ಲಿ 710 ಕೋಟಿ ರೂ. ಬಿಡುಗಡೆ ಆಯ್ತು. ಆಗ ಕಾಂಗ್ರೆಸ್‌ನ ಸಂಸದರೊಬ್ಬರು ನಮ್ಮ ಸರ್ಕಾರ ಬರುತ್ತಿದೆ, ಒಂದು ರೂಪಾಯಿ ಬಿಡುಗಡೆ ಆಗಬಾರದು ಎಂದು ಎಚ್ಚರಿಕೆ ಕೊಟ್ಟರು. ಆ ದುಡ್ಡನ್ನು ಹಾಗೆ ಅಕೌಂಟ್‌ನಲ್ಲಿ ಇಟ್ಟರು. ಹಣ ಬಿಡುಗಡೆಗೆ ಹಲವಾರು ಮೀಟಿಂಗ್ ಆದವು. ಐದು ಪರ್ಸೆಂಟ್‌ನಿAದ ಹತ್ತು ಪರ್ಸೆಂಟ್ ಆಗಿದೆ. ಇದೀಗ ಹತ್ತರಿಂದ 15 ಪರ್ಸೆಂಟ್ ಕೊಟ್ಟರೆ ಹಣ ಬಿಡುಗಡೆ ಮಾಡುತ್ತೇವೆಂದು ಹೇಳಿದ್ದಾರೆ ಎಂದು ಆರೋಪ ಮಾಡಿದರು.

ಈಗ ಎಲೆಕ್ಷನ್ ಆಗುವುದೇ ಕಲೆಕ್ಷನ್ ಮಾಡೋಕೆ. ನಾನು ಪ್ರಾಮಾಣಿಕ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುತ್ತಾರೆ. ರೀಡೂ ಪ್ರಕರಣದಲ್ಲಿ ಏನಾಯ್ತು. ನಾನು ವರ್ಗಾವಣೆ ದಂಧೆ ಮಾಡಲು ನನ್ನ ಸಹಿ ಮಾರಾಟಕ್ಕೆ ಇಟ್ಟಿರಲಿಲ್ಲ. ರಾಜಕೀಯ ಮಾಡಲು ಹಣ ಬೇಕು. ಅದಕ್ಕೆ ಅಂತ ನಾನು ಸಹಿ ಮಾರಾಟ ಮಾಡಿಕೊಂಡಿಲ್ಲ. ಪೆನ್‌ಡ್ರೈವ್ ತರುವುದಕ್ಕೆ ನಾನು ಏಕೆ ಎಸ್‌ಪಿ ರೋಡ್‌ಗೆ ಏಕೆ ಹೋಗಲಿ. ಪೆನ್‌ಡ್ರೈವ್ ರೆಡಿ ಮಾಡಿಕೊಳ್ಳಲು ಅವಕಾಶ ಕೊಟ್ಟವರು ನೀವೆತಾನೆ. ಒಂದು ಪೆನ್‌ಡ್ರೈವ್ ತೋರಿಸಿದ್ದಕ್ಕೆ ಎಷ್ಟು ಸಚಿವರ ನಿದ್ದೆಗೆಟ್ಟಿತ್ತು. ನನಗೆ ಸಂಬAಧಿಸಿದ್ದಾ ಅಂತ ತಲೆಕೆಡಿಸಿಕೊಂಡಿದ್ದಾರೆ. ಯಾರದ್ದು ಅಣ್ಣ ಪೆನ್‌ಡ್ರೈವ್ ರಂದು ಕಾಂಗ್ರೆಸ್‌ನವರೇ ಕೇಳುತ್ತಿದ್ದರು. ದಯವಿಟ್ಟು ಪೆನ್‌ಡ್ರೈವ್ ಬಿಡುಗಡೆ ಮಾಡಬೇಡಿ ಎಂದು ಬಂದಿದ್ದರು ಎಂದು ಹೇಳಿದರು.


ನನಗೆ ಬಿಜೆಪಿ ಜೊತೆ ಹೋಗುವ ದಾರಿದ್ಯ್ರ ಬಂದಿಲ್ಲ. ನಾನು ಕಾರ್ಯಕರ್ತರಿಗೆ ಹೇಳುತ್ತೇನೆ. ಸದನದಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದೇನೆ. ಯಾವುದೇ ಪಕ್ಷಗಳ ಜೊತೆ ಸೇರಿ ಭಿಕ್ಷೆ ಬೇಡುವ ಪರಿಸ್ಥಿತಿ ನಮಗೆ ಬಂದಿಲ್ಲ. ನಾನು ಯಾರ ಮನೆಯ ಬಾಗಿಲಿಗೂ ಹೋಗಲ್ಲ. ನಮ್ಮ ರಾಜ್ಯಕ್ಕೆ ಕಾಂಗ್ರೆಸ್ ಎಷ್ಟು ದ್ರೋಹ ಮಾಡಿದ್ದಾರೊ ಅಷ್ಟೇ ದ್ರೋಹವನ್ನು ಬಿಜೆಪಿ ಕೂಡ ಮಾಡಿದೆ ಎಂದರು.

Leave a Reply

Your email address will not be published. Required fields are marked *