Share this news

ನಿತ್ಯ ಪಂಚಾಂಗ :
ದಿನಾಂಕ:06.08.2023, ಭಾನುವಾರ, ಸಂವತ್ಸರ:ಶೋಭಕೃತ್,
ದಕ್ಷಿಣಾಯನ,ವರ್ಷ ಋತು,ಅಧಿಕ ಶ್ರಾವಣ ಮಾಸ
ಕೃಷ್ಣಪಕ್ಷ, ನಕ್ಷತ್ರ:ರೇವತಿ ,
ರಾಹುಕಾಲ 05:21 ರಿಂದ 06:56 ಗುಳಿಕಕಾಲ-03:46 ರಿಂದ 05:21 ಸೂರ್ಯೋದಯ (ಉಡುಪಿ) 06:18 ಸೂರ್ಯಾಸ್ತ – 06:55

ರಾಶಿ ಭವಿಷ್ಯ:

ಮೇಷ: ಭವಿಷ್ಯದ ಬಗ್ಗೆ ನಿಮಗಿರುವ ಕಲ್ಪನೆಯು ಬದಲಾಗಬಹುದು. ‌ಹಣಕಾಸಿನ ವಿಚಾರದಲ್ಲಿ ನೀವು ಬಹಳ ಕಾಳಜಿಯನ್ನು ವಹಿಸಬೇಕಾಗುವುದು. ವಾಹನಕ್ಕಾಗಿ ಖರ್ಚು ಮಾಡುವ ಸ್ಥಿತಿಯು ಬರಬಹುದು. ಸಹಾಯವನ್ನು ಯಾರಾದರೂ ಕೇಳುವರು.

ವೃಷಭ: ಬಂಧುಗಳ ವಿಚಾರದಲ್ಲಿ ನಿಮಗೆ ಸಂಪೂರ್ಣ ಮನಸ್ಥಿತಿಯು ಏಕರೂಪವಾಗಿ ಇರಲಾರದು. ಸಂಬಂಧಗಳನ್ನು ಸಡಿಲ‌ಮಾಡಿಕೊಳ್ಳುವಿರಿ. ನಿಮ್ಮ ವರ್ತನೆಯಿಂದ ನಿಮ್ಮನ್ನು ನೋಡುವ ಕ್ರಮವು ಬದಲಾದೀತು. ಮುಖದಲ್ಲಿ ನಗುವುದು ನಿಮ್ಮ ಎಲ್ಲ ಕೆಲಸಗಳನ್ನು ಮಾಡಿಸಿಕೊಡುವುದು.

ಮಿಥುನ ರಾಶಿ: ಆರ್ಥಿಕ ಮೂಲವು ಕೈತಪ್ಪಿ ಹೋಗಬಹುದು. ಕನಸನ್ನು ನನಸಾಗಿಸಲು ನಿಮ್ಮ ಪ್ರಯತ್ನ ಅತಿಮುಖ್ಯವಾಗುವುದು. ಎಲ್ಲವೂ ಸರಿಯಿದ್ದರೂ ಮತ್ತೆಲ್ಲೋ ತಪ್ಪನ್ನು ಕಂಡುಕೊಳ್ಳುವಿರಿ. ನಿಮ್ಮ‌ ನಿಯಮವನ್ನು ಪಾಲಿಸಿದ್ದು ನಿಮಗೆ ಖುಷಿ ಕೊಡಬಹುದು. ನಿಮಗೆ ಒತ್ತಡದಲ್ಲಿ ಕೆಲಸ ಮಾಡುವುದು ಅಭ್ಯಾಸವಾಗಿ ಹೋಗಿದೆ. ತಾಯಿಯಿಂದ ಅತಿಯಾದ ಸಹಕಾರವನ್ನು ಬಯಸುವಿರಿ.

ಕಟಕ ರಾಶಿ: ಸುಖವಾಗಿರಲು ಬೇಕಾದ ಎಲ್ಲ ಮಾರ್ಗಗಳನ್ನು ಹುಡುಕುವಿರಿ. ಗೊತ್ತಿಲ್ಲದೇ ಮಾತನಾಡುವುದು ನಿಮಗೆ ಶೋಭೆ ತರದು. ವಂಚನೆಯ ಬಲೆಯಲ್ಲಿ ನೀವು ಸಿಕ್ಕಿಕೊಳ್ಳಬಹುದು. ಹಿರಿಯರಿಗೆ ಗೌರವವನ್ನು ಸಲ್ಲಿಸಿ. ನಿಮ್ಮವರನ್ನು ರಕ್ಷಿಸಿಕೊಳ್ಳಲು ಬಹಳ ಪ್ರಯತ್ನ ಪಡುವಿರಿ. ನೀವು ಬಯಸಿದ್ದನ್ನು ಪಡೆದುಕೊಂಡು ನೆಮ್ಮದಿಯಾಗಿ ಇರಲಾರಿರಿ.

ಸಿಂಹ ರಾಶಿ: ನಿಮ್ಮ ಮಾತನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೂ ಆಗದು. ದೂರಪ್ರಯಾಣಕ್ಕೆ ಸಂಗಾತಿಯ ಜೊತೆ ತೆರಳುವಿರಿ. ಮನೆಯ ವಿರೋಧಿಸುವ ಕೆಲಸವನ್ನು ನೀವು ಮಾಡುವಿರಿ. ಆಪ್ತರ ಭೇಟಿಯಾಗುವ ನಿಮ್ಮ ಕಾರ್ಯವು ಸಫಲವಾಗದು. ಅಧಿಕಾರಿ ವರ್ಗ ನಿಮ್ಮ‌ ಮೇಲೆ ಬಂದ ದೂರಿನ ವಿಚಾರಣೆಯನ್ನು ಮಾಡಬಹುದು. ಸ್ತ್ರೀಯರ ಸಖ್ಯವನ್ನು ನೀವು ಮಾಡಿಕೊಳ್ಳುವಿರಿ. ಹಿತಶತ್ರುಗಳನ್ನು ಹಿಮ್ಮೆಟ್ಟಿಸಲು ನಿಮಗೆ ಕೆಲವು ತಂತ್ರಗಳು ಗೊತ್ತಿರುವುದು. ಅದನ್ನು ಪ್ರಯೋಗಿಸುವಿರಿ.

ಕನ್ಯಾ ರಾಶಿ: ಒಂಟಿಯಾಗಿ ಇದ್ದಷ್ಟೂ ನಿಮಗೆ ಏನೇನೋ ಯೋಚನೆಗಳು ಬರಬಹುದು. ನಿಮ್ಮ ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಿ. ಜಾಣತನದಿಂದ ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳಬೇಕಾಗಬಹುದು.‌ ಇಂದು ನಿಮಗೆ ಎಲ್ಲ ಕಾರ್ಯಗಳೂ ವಿಳಂಬವಾಗಲಿದೆ. ನಿಮ್ಮ ಮಾತಿಗೆ ಬೆಲೆ ಇಲ್ಲದೇ ಹೋಗಬಹುದು. ನೀವು ನಡೆಸುವ ಉದ್ಯಮಕ್ಕೆ ನೀವು ವೇಗವನ್ನು ಕೊಡುವಿರಿ. ವಿದೇಶಪ್ರಯಾಣಕ್ಕೆ ನಿಮಗೆ ಅವಕಾಶಗಳು ಬರಬಹುದು. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳಬಹುದು. ಆತ್ಮೀಯರ ಒಡನಾಟದಿಂದ ನಿಮಗೆ ಖುಷಿಯಾಗಲಿದೆ.

ತುಲಾ ರಾಶಿ: ನಿಮ್ಮ ಬಳಿ ಅಪರಿಚಿತರು ಸಹಾಯವನ್ನು ಕೇಳಿಕೊಂಡು ಬರಬಹುದು. ಇಲ್ಲ ಎನದೇ ಅಲ್ಪವನ್ನಾದರೂ ದಾನಮಾಡಿ. ಮನೆಗೆ ಬೇಕಾದ ವಸ್ತುಗಳನ್ನು ನೀವು ಖರೀದಿಸುವಿರಿ. ಪತ್ನಿಗೆ ಅಚ್ಚರಿಯ ಉಡುಗೊರೆಯನ್ನು ನೀವು ನೀಡುವಿರಿ.‌ ಮನೆಯಲ್ಲಿ ದೊಡ್ಡ ಮಟ್ಟದಲ್ಲಿ ಧಾರ್ಮಿಕ ಕಾರ್ಯವನ್ನು ಮಾಡುವ ಯೋಚನೆ‌ ಇರಲಿದೆ. ಅಧಿಕ ಕಾರ್ಯಗಳು ಇರಲಿದ್ದು ನಿಮಗೆ ಯಾವುದೂ ಸೂಚಿಸದೇ ಹೋಗಬಹುದು. ಬಂಧುಗಳ ಜೊತೆ ನಿಮ್ಮ ವಿಚಾರವನ್ನು ಹಂಚಿಕೊಂಡು ಸಮಾಧಾನ ಪಡುವಿರಿ. ಭವಿಷ್ಯದ ಬಗ್ಗೆ ಚಿಂತೆಯೂ ಕಾಡಬಹುದು.

ವೃಶ್ಚಿಕ ರಾಶಿ: ಸಾಲವೇ ನಿಮಗೆ ಸಾಲವಾಗದು. ಅನಾರೋಗ್ಯದ ಕಾರಣ ಆರ್ಥಿಕ ಮಟ್ಟವು ಕುಸಿಯುವುದು. ಹೆಚ್ಚಿನ ಆರ್ಥಿಕಮೂಲವನ್ನೂ ಪಡೆಯಲು ಕಷ್ಟವಾದೀತು. ಹೊಸ ಉದ್ಯಮದ ಯೋಚನೆಯನ್ನು ಸದ್ಯ ಕೈ ಬಿಡುವುದು ಒಳ್ಳೆಯದು. ಧಾರ್ಮಿಕ ಕ್ಷೇತ್ರವನ್ನು ಸುತ್ತಿ ಬರುವ ಮನಸ್ಸಾದೀತು. ಇನ್ನೊಬ್ಬರ ಮೇಲೆ‌ ನಿಮಗೆ ಪ್ರೀತಿ ಉಂಟಾಗಬಹುದು. ಆಪ್ತರ ಜೊತೆ ನೋವು ಎಲ್ಲವನ್ನೂ ಮರೆಯಲು ಸುತ್ತಾಡಲಿದ್ದೀರಿ. ನಿಮ್ಮ ಬಗ್ಗೆ ಇತರರಿಗೆ ಅನುಕಂಪ ಬರಬಹುದು. ಅಧಿಕಾರಕ್ಕಾಗಿ ನೀವು ತಂತ್ರವನ್ನು ಬಳಸಬಹುದು.

ಧನು ರಾಶಿ: ಜೀವನವು ಬಹಳ ನಿಧಾನವಾಗಿ ಚಲಿಸುತ್ತಿದೆ ಎಂದು ಅನ್ನಿಸಬಹುದು. ಇಂದು ಆಲಸ್ಯವು ಅಧಿಕವಾಗಿ ಇರಲಿದೆ. ಉತ್ತಮವಾದ ವೈವಾಹಿಕ ಸಂಬಂಧವನ್ನು ಪೂರ್ವಾಪರ ಯೋಚಿಸದೇ ಬಿಡುವಿರಿ. ಸ್ವತಂತ್ರವಾಗಿ ಬದುಕಲು ನಿಮಗೆ ಇಷ್ಟವಾದೀತು. ವಿಶ್ರಾಂತಿಯನ್ನು ಪಡೆಯಲು ಸುಳ್ಳನ್ನು ಹೇಳುವಿರಿ.‌ ಬಂಧುಗಳ ಭೇಟಿಯನ್ನು ಮಾಡಲು ದೂರದಿಂದ ಬರುವಿರಿ. ನೇರ ನುಡಿಗಳು ಇನ್ನೊಬ್ಬರಿಗೆ ನೋವನ್ನು ಕೊಡಬಹುದು. ಆಪ್ತರ ಜೊತೆ ಅನೇಕ ದಿನಗಳ ಅನಂತರ ನೀವು ಕಾಲಕಳೆಯುವಿರಿ. ಇದು ನಿಮಗೆ ಸಂತೋಷವನ್ನು ಕೊಡುವುದು. ಬೆನ್ನಿನ ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು.

ಮಕರ ರಾಶಿ: ಬಂಧುಗಳಿಗಾಗಿ ನೀವು ಹಣವನ್ನು ನೀಡಬೇಕಾಗಬಹುದು. ವಿದ್ಯಾಭ್ಯಾಸಕ್ಕಾಗಿ ಮನೆಯವರಿಂದ ಪ್ರೋತ್ಸಾಹವನ್ನು ಪಡೆಯುವಿರಿ. ನಿಮ್ಮನ್ನು ಅತಿಯಾಗಿ ಬಿಂಬಿಸಿಕೊಳ್ಳಲು ಇಷ್ಟಪಡುವಿರಿ. ನಿಮಗೆ ಕೆಲವು ಜವಾಬ್ದಾರಿಗಳು ಬಂದು ಗಂಭೀರವಾಗುವಿರಿ. ನಿಮ್ಮ ವೃತ್ತಿಯು ನಿಮಗೆ ಹಿಡಿಸುವುದು. ಸಹೋದರಿಂದ ನಿಮಗೆ ಬೇಕಾದ ಸಹಾಯ ಇಂದು ಪಡೆಯುವಿರಿ. ನಿಮ್ಮ ಬಗ್ಗೆ ಯಾರಿಂದಲೋ ಮಾಹಿತಿಯನ್ನು ಪಡೆಯುವರು. ಸಂಬಂದಿಸದ ವಿಚಾರದಲ್ಲಿ ಆಸಕ್ತಿಯು ಹೆಚ್ಚಾಗಬಹುದು. ನಿಮ್ಮನ್ನು ಯಾರಾದರೂ ಅಸ್ತ್ರವಾಗಿ ಬಳಸಿಕೊಳ್ಳಬಹುದು.

ಕುಂಭ ರಾಶಿ: ನೀವು ಬಂಧುಗಳಿಂದ ಸಹಾಯವನ್ನು ನಿರೀಕ್ಷಿಸುವಿರಿ. ನಿಮ್ಮ ಸಂಪತ್ತಿನ ಅಳೆಯುವರು. ಗುಟ್ಟನ್ನು ನೀವು ಬಿಟ್ಟಕೊಡುವಿರಿ. ನಿಮ್ಮ ತಪ್ಪು ತಿಳಿದಿಕೊಂಡವರಿಗೆ ಸರಿಯಾದ‌ ಮಾಹಿತಿಯನ್ನು ಕೊಡುವಿರಿ.‌ ನಿಮ್ಮ ಸಮಾಜ ಸೇವೆಯನ್ನು ಗುರುತಿಸಿ ನಿಮಗೆ ಉನ್ನತ ಪ್ರಶಸ್ತಿಯು ಸಿಗಬಹುದು. ಆಕಸ್ಮಿಕ ಧನಲಾಭವು ನಿಮಗೆ ಸಂತೋಷವನ್ನು ತರಿಸಬಹುದು. ಸುಳ್ಳು ಹೇಳಿಕೊಂಡು ನಿಮ್ಮ ದಾಖಲೆಗಳನ್ನು ಪರಿಶೀಲಿಸಬಹುದು. ಧಾರ್ಮಿಕ ವಿಚಾರಕ್ಕೆ ನೀವು ಹೆಚ್ಚು ಒತ್ತಡುವಿರಿ. ಕುಟುಂಬದ ಮನೆಯಲ್ಲಿಯೇ ಇದ್ದು ಸಮಯವನ್ನು ಕಳೆಯುವಿರಿ. ಹೊಸತನ್ನು ಮಾಡಬೇಕು ಎಂಬ ಮನಸ್ಸು ಬರಬಹುದು.

ಮೀನ ರಾಶಿ: ಮೋಜಿನಲ್ಲಿ ಈ ದಿನವನ್ನು ಕಳೆಯುವಿರಿ. ಇಂದು ವಿದ್ಯಾಭ್ಯಾಸದಲ್ಲಿ ಆಸಕ್ತಿಯು ಕಡಿಮೆ ಆಗಲಿದೆ. ಆಸ್ತಿ ಖರೀದಿಯ ಬಗ್ಗೆ ಮನೆಯಲ್ಲಿ ಚಿಂತನೆಯನ್ನು ನಡೆಸಬಹುದು. ಬರಬೇಕಾದ ಹಣವನ್ನು ಪಡೆಯಲು ಮನೆಗೇ ಹೋಗಲಿದ್ದೀರಿ. ಬಂಧುಗಳ ಭೇಟಿಯು ನಿಮಗೆ ಖುಷಿಯನ್ನು ಕೊಡಬಹುದು. ಉದ್ಯೋಗದಲ್ಲಿ ಮನಸ್ಸು ಸ್ಥಿರವಾಗಿ ಇರಲಿದೆ. ಮಾತು ಅವಮಾನವಂತೆ ಕಂಡರೆ ಅಲ್ಲಿರುವುದು ಬೇಡ.‌ ಬಂಧುಗಳ ಜೊತೆ ನಿಮ್ಮ ಮಾತುಕತೆ ಅಸಹಜವಾಗಿ ಇರಲಾರದು. ಸ್ನೇಹಕ್ಕೆ ನಿಮ್ಮ ಪ್ರತ್ಯುಪಕಾರವು ಇರಲಿದೆ. ಪತ್ನಿಯ ಮಾತು ನಿಮಗೆ ಅಸಮಾಧಾನವನ್ನು ತರಿಸಬಹುದು.

Leave a Reply

Your email address will not be published. Required fields are marked *