ಬೆಂಗಳೂರು: ಕರೆಂಟ್ ಫ್ರೀ, ಬಸ್ ಫ್ರೀ, ಗೃಹಲಕ್ಷಿö್ಮ ಎಂದು ಖುಷಿಯಲ್ಲಿರುವ ಜನರಿಗೆ ಸರ್ಕಾರ ಶಾಕ್ ಕೊಟ್ಟಿದೆ. ಏನೆಂದರೆ ದಿನಬಳಕೆಯ ನಂದಿನಿ ಹಾಲು ದರ ಪ್ರತಿ ಲೀಟರ್‌ಗೆ 3 ರೂಪಾಯಿ ಏರಿಕೆಯಾಗಿದೆ. ಆರ್ಥಿಕ ನಷ್ಟದ ಕಾರಣ ಹೇಳಿ ಕೆಎಂಎಫ್ ಹಾಲಿನ ದರವನ್ನ 5 ರೂಪಾಯಿ ಹೆಚ್ಚಳಕ್ಕೆ ಬೇಡಿಕೆ ಇಟ್ಟಿತ್ತು. ಆದರೆ ಸರ್ಕಾರ 3 ರೂಪಾಯಿ ಹೆಚ್ಚಳಕ್ಕೆ ಅನುಮತಿ ನೀಡಿದ್ದು, ಆಗಸ್ಟ್ 1 ರಿಂದಲೇ ಎಲ್ಲಾ ಮಾದರಿಯ ಹಾಲಿಗೂ ಹೊಸ ದರ ಜಾರಿಯಾಗಲಿದೆ.
ಹಾಲಿನ ದರ 3 ರೂಪಾಯಿ ಏರಿಕೆ ಹಿನ್ನಲೆ ಗ್ರಾಹಕರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಒಂದು ಕಡೆ ಫ್ರೀ ಎಂದು ಕೊಡ್ತಾರೆ ಮತ್ತೊಂದು ಕಡೆ ಎಲ್ಲಾ ವಸ್ತು ಬೆಲೆ ಜಾಸ್ತಿ ಮಾಡ್ತಾರೆ. ಇವರಿಗೆ ಫ್ರೀ ಕೊಡಿ ಅಂತಾ ಹೇಳಿದವರು ಯಾರು, ಮಧ್ಯಮ ವರ್ಗದ ಜನ ಬದುಕುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡಬೇಡಿ. ಬೆಳಗಾದ್ರೆ ಹಾಲು ಬೇಕು. ಹಾಲಿನ ಬೆಲೆ ಹೆಚ್ಚಿಸಿದರೆ ಬಹಳ ಕಷ್ಟವಾಗುತ್ತದೆ. ಮದ್ಯದ ಬೆಲೆ ಹೆಚ್ಚಿಸಿದರೂ ಪರವಾಗಿಲ್ಲ, ಕೊನೆಗೆ ಕುಡಿಯುವುದನ್ನಾದರೂ ಬಿಡುತ್ತಾರೆ. ಆದರೆ ಹಾಲಿನ ದರ ಹೆಚ್ಚಳ ಮಾಡಬೇಡಿ ಎಂದು ಮನವಿ ಮಾಡುತ್ತಿದ್ದಾರೆ.
ಕೆಎಂಎಫ್ ರೈತರಿಂದ 31.14 ರೂ. ಜತೆಗೆ ಸರ್ಕಾರದಿಂದ ಐದು ಪ್ರೋತ್ಸಾಹ ಧನ ಸೇರಿ 36 ರೂಪಾಯಿಗೆ ಖರೀದಿ ಮಾಡುತ್ತಿದ್ದು, ಪ್ರತಿ ಲೀಟರ್‌ಗೆ ಗ್ರಾಹಕರಿಗೆ 39 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಅದರಂತೆ ಇದೀಗ ಎಲ್ಲಾ ಮಾದರಿಯ ಹಾಲಿಗೂ 3 ರೂ ದರ ಏರಿಕೆ ಆಗಲಿದ್ದು, ರೈತರಿಂದ ಖರೀದಿ ಮಾಡುವ ದರವೂ ಹೆಚ್ಚಳವಾಗಲಿದೆ