ಮೂಡಬಿದಿರೆ: ಪರಮ ಪೂಜ್ಯ ತಿಮ್ಮಣ್ಣ ಅರಸರಾದ ಡಾ. ಪದ್ಮ ಪ್ರಸಾದ್ ಅಜಿಲರು ಹಾಗೂ ಕಟ್ಟೆಮಾರ್ ಶ್ರೀ ಮಂತ್ರದೇವತಾ ಕ್ಷೇತ್ರ ಸಾನಿಧ್ಯದ ಧರ್ಮದರ್ಶಿಗಳಾದ ಮನೋಜ್ ಕಟ್ಟೆಮಾರ್ ಇವರುಗಳ ಶುಭ ಆಶೀರ್ವಾದ ಹಾಗೂ ದಿವ್ಯ ಉಪಸ್ಥಿತಿಯೊಂದಿಗೆ ದೈವ ದೇವರುಗಳ ಮೊಗ ಮೂರ್ತಿ ಮತ್ತು ಪೂಜಾ ಸಾಮಗ್ರಿಗಳ ಮಳಿಗೆ “ಶ್ರೀ ಭಗವಾನ್ ಸಾಯಿಬಾಬಾ ಮೆಟಲ್ಸ್” ಅಳದಂಗಡಿಯ ಶ್ರೀ ದೇವಿ ಕಾಂಪ್ಲೆಕ್ಸ್ ನಲ್ಲಿ ನಾಳೆ ಬೆಳಿಗ್ಗೆ 11 ಗಂಟೆಗೆ ಶುಭಾರಂಭಗೊಳ್ಳಲಿದೆ.
ಅರುಣ್ ಕುಮಾರ್ ಪುತ್ತಿಲ ಅಧ್ಯಕ್ಷತೆ ವಹಿಸಲಿದ್ದು ,ಮುಖ್ಯ ಅತಿಥಿಗಳಾಗಿ ವೇಣೂರು ಠಾಣಾಧಿಕಾರಿ ಸೌಮ್ಯ ಜೆ, ಅಳದಂಗಡಿ ಗ್ರಾಪಂ ಅಧ್ಯಕ್ಷೆ ಸೌಮ್ಯ ಹರಿಪ್ರಸಾದ್, ಉಡುಪಿ ಜಿಲ್ಲಾ ಹಿಂದೂ ಜಾಗರಣ ವೇದಿಕೆಯ ಮಹೇಶ್ ಬೈಲೂರು, ಮಂಗಳೂರು ಅತ್ತಾವರ ವಿಭಾಗದ ಬಜರಂಗದಳ ಸಹ ಸಂಚಾಲಕ ಪುನೀತ್ ಅತ್ತಾವರ, ಸುರೇಶ್ ಪೂಜಾರಿ ಅಭಿಮಾನಿ ಬಳಗದ ವಿಶ್ವನಾಥ ಬಂಗೇರ, ಕಲ್ಲಡ್ಕ ಹಿಂದೂ ಯುವ ಮುಖಂಡ ಮಿಥುನ್ ಕಲ್ಲಡ್ಕ, ಅಳದಂಗಡಿ ಆಟೋ ಚಾಲಕರು ಮಾಲಕರ ಸಂಘದ ಅಧ್ಯಕ್ಷ ಹರ್ಷೇಂದ್ರ, ಅಳದಂಗಡಿ ಗುರುದೇವ ಸ್ಟೋರ್ ಮಾಲಕ ಜನಾರ್ಧನ್ ಪೂಜಾರಿ, ಅಳದಂಗಡಿ ಶ್ರೀದೇವಿ ಕಾಂಪ್ಲೆಕ್ಸ್ ಮಾಲಕ ಎನ್ ಎ ಗೋಪಾಲ್, ಇಂಚರ ಫ್ರೆಂಡ್ಸ್ ಅಧ್ಯಕ್ಷ ಗಿರೀಶ್, ಶಿರ್ಲಾಲು ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಹರೀಶ್ ಕಲ್ಲಾಜೆ, ಆಲಡ್ಕ ಹಿಂದೂ ಯುವಶಕ್ತಿ ಅಧ್ಯಕ್ಷ ದೇವದಾಸ್ ಸಾಲಿಯಾನ್, ಹಿಂದೂ ಜಾಗರಣ ವೇದಿಕೆ ತಾಲೂಕು ಸಂಚಾಲಕ ಗುರುಪ್ರಸಾದ್ ನಾರಾವಿ ,ಪ್ರಜಾವಾಣಿ ವರದಿಗಾರರಾದ ಗಣೇಶ್ ಶಿರ್ಲಾಲು, ರಾಜ ಕೇಸರಿ ಟ್ರಸ್ಟ್ ಕಾನೂನು ಗೌರವ ಸಲಹೆಗಾರರಾದ ಪ್ರಶಾಂತ್ ಎಂ, ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯ ತಾಲೂಕು ಕಾರ್ಯಕ್ರಮ ನಿರೂಪಕ ಅಜಯ್ ಉಪಸ್ಥಿತರಿರುವರು.
ರಾಜ ಕೇಸರಿ ಜಿಲ್ಲಾಧ್ಯಕ್ಷ ಅಶೋಕ್ ಎಸ್ ಪೂಜಾರಿ ಮಲೆಮಾರ, ರಾಜಕೇಸರಿ ಹಾಸನ ಜಿಲ್ಲೆ ಜಿಲ್ಲಾಧ್ಯಕ್ಷ ಬಸವರಾಜ್, ರಾಜಕೇಸರಿ ಉಡುಪಿ ಜಿಲ್ಲಾ ಸಂಚಾಲಕ ಸಂತೋಷ್ ಕುಮಾರ್ ಬೈಂದೂರು, ರಾಜಕೇಸರಿ ಬೆಳ್ತಂಗಡಿ ತಾಲೂಕು ಉಪಾಧ್ಯಕ್ಷ ಚಂದ್ರಶೇಖರ್, ರಾಜಕೇಶ್ವರಿ ಬಂಟ್ವಾಳ ತಾಲೂಕು ಅಧ್ಯಕ್ಷ ಪ್ರಸಾದ್ ಕುಲಾಲ್ ಹಾಗೂ ಮೂಡಬಿದ್ರೆ ತಾಲೂಕು ರಾಜ ಕೇಸರಿ ಅಧ್ಯಕ್ಷ ಕಿಶೋರ್ ಕುಮಾರ್ ಉಪಸ್ಥಿತರಿರುವರು ಎಂದು ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ನ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ತಿಳಿಸಿದ್ದಾರೆ.