ಕಾರ್ಕಳ : ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಲೆಮಿನಾಕ್ರಾಸ್ ಬಳಿ ಇರುವ ಅನ್ಯ ಪೆಟ್ರೋಲ್ ಬಂಕ್‌ನಲ್ಲಿ ಶುಕ್ರವಾರ ತಡರಾತ್ರಿ ನುಗ್ಗಿದ ಕಳ್ಳರು ನಗದು ಸೇರಿದಂತೆ ರೂ.23,000 ರೂ. ಮೌಲ್ಯದ ಸೊತ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.
ಶುಕ್ರವಾರ ರಾತ್ರಿ ಪೆಟ್ರೋಕ್ ಬಂಕ್‌ನ ಗ್ಲಾಸಿನ ಬಾಗಿಲನ್ನು ಮುರಿದು 5,000 ರೂ. ನಗದು,3000 ರೂ. ಮೌಲ್ಯದ ಡಿವಿಆರ್ ಹಾಗೂ 15,000 ರೂ. ಮೌಲ್ಯದ ಎಲೆಕ್ಟಾçನಿಕ್ ಉಪಕರಣ ಒಟ್ಟು ರೂ.23,000 ರೂ. ಮೌಲ್ಯದ ಸೊತ್ತುಗಳನ್ನು ಕಳವುಗೈದಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಣೆಯಲ್ಲಿ ಪ್ರಕರಣ ದಾಖಲಾಗಿದೆ.