ಕಾರ್ಕಳ: ಬಟ್ಟೆ ಒದಗಿಸುತ್ತಿದ್ದ ವೇಳೆ ಯುವಕನೋರ್ವ ವಿದ್ಯುತ್ ಶಾಕ್ ನಿಂದ ದಾರುಣವಾಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಎಂಬಲ್ಲಿ ನಡೆದಿದೆ
ಶನಿವಾರ ಮುಂಜಾನೆ ಈ ದುರ್ಘಟನೆ ನಡೆದಿದ್ದು, ಬಿಹಾರ ಮೂಲದ ಸೌರವ್ (22) ಎಂಬವರು ಮೃತಪಟ್ಟ ಯುವಕ.
ಸೌರವ್ ಕೂಲಿ ಕೆಲಸಕ್ಕಾಗಿ ಬಿಹಾರದಿಂದ ಬಂದಿದ್ದು,ಶನಿವಾರ ತಾನು ವಾಸವಾಗಿದ್ದ ಮನೆಯಲ್ಲಿ ಬಟ್ಟೆ ಒಗೆದು ಒಣ ಹಾಕಲು ಹೋದಾಗ ಪಕ್ಕದಲ್ಲಿನ ಏಣಿಯನ್ನು ಸ್ಪರ್ಶಿಸಿದಾಗ ಅದರಲ್ಲಿ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.