Share this news

ಬೆಂಗಳೂರು : ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೂರು ದಿನ ತುಂಬುವಷ್ಟರಲ್ಲಿ 100 ಪರ್ಸೆಂಟ್ ಸರ್ಕಾರವಾಗಲಿದೆ ಎಂದು ಮಾಜಿ ಸಚಿವ ವಿ ಸುನಿಲ್ ಕುಮಾರ್ ಲೇವಡಿ ಮಾಡಿದ್ದಾರೆ.

ಗುತ್ತಿಗೆದಾರ ಗೌತಮ ಆತ್ಮಹತ್ಯೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಅಧಿಕಾರಕ್ಕೆ ಬಂದ ಮರು ದಿನದಿಂದಲೇ ಅಧಿಕೃತವಾಗಿ ಭ್ರಷ್ಟಾಷಾರದ ಅಂಗಡಿ ಬಾಗಿಲು ತೆರೆದ ಕಾಂಗ್ರೆಸಿಗರು ಆರೋಪಗಳೆಲ್ಲ ನಕಲಿ ಎಂದು ತಪ್ಪಿಸಿಕೊಳ್ಳುತ್ತಿದ್ದರು. ಈ ಸರ್ಕಾರದ ಧನದಾಹಕ್ಕೆ ಈಗ ಗುತ್ತಿಗೆದಾರ ಗೌತಮ್ ಪ್ರಾಣ ತೆತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಸರ್ಕಾರದ ವಿರುದ್ಧ ಬಿಡುಗಡೆಯಾದ ಪ್ರತಿ ದಾಖಲೆಯನ್ನೂ ನಕಲಿ ಎಂದು ನುಣುಚಿಕೊಂಡಿದ್ದೀರಿ. ಈ ಆತ್ಮಹತ್ಯೆಯೂ ನಕಲಿ ಎಂದು ಹೇಳುತ್ತೀರಾ ? ಎಂದು ಪ್ರಶ್ನಿಸಿದ್ದಾರೆ.

ಗುತ್ತಿಗೆದಾರರು ನಿಮ್ಮಸರ್ಕಾರದ ವಿರುದ್ಧ ಹದಿನೈದು ಪರ್ಸೆಂಟ್ ಆರೋಪ ಮಾಡಿದ್ದಾರೆ. ಅಧಿಕಾರಕ್ಕೆ ಬಂದು ನೂರು ದಿನ ಪೂರೈಸುವುದರೊಳಗೆ ಇಷ್ಟೊಂದು ಆರೋಪ. ಇನ್ನೆಷ್ಟು ಗುತ್ತಿಗೆದಾರರನ್ನು ಸಾವಿನ ದವಡೆಗೆ ನೂಕಲು ನೀವು ಯೋಜಿಸಿದ್ದೀರಿ. ಸರ್ಕಾರ ನೂರು ದಿನ ಪೂರೈಸುವ ಹೊತ್ತಿಗೆ ನಿಮ್ಮದು 100% ಭ್ರಷ್ಟ ಸರ್ಕಾರವಾಗುವುದರಲ್ಲಿ ಅನುಮಾನವಿಲ್ಲ ಎಂದು ಟೀಕಿಸಿದ್ದಾರೆ.

Leave a Reply

Your email address will not be published. Required fields are marked *