ಮುಲ್ಕಿ: ಪಡುಪಣಂಬೂರು ಒಳ ಪೇಟೆಯ ಸಂತೆಕಟ್ಟೆ ಬಳಿಯ ಪುಷ್ಪರಾಜ್ ಅಮೀನ್ ಎಂಬವರ ಮನೆಯ ಹಿಂದುಗಡೆ ಡ್ರೈನೇಜ್ ಪಿಟ್ ನಲ್ಲಿ ಮಹಿಳೆಯ ಶವ ಅನುಮಾನಾಸ್ಪದ ರೀತಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತರನ್ನು ಪಡು ಪಣಂಬೂರು ಕಲ್ಲಾಪು ಬಳಿಯ ನಾಗಮ್ಮ ಶೆಟ್ಟಿಗಾರ್ (85) ಎಂದು ಗುರುತಿಸಲಾಗಿದೆ.
ಮೃತ ಮಹಿಳೆ ಕಳೆದ ನಾಲ್ಕು ತಿಂಗಳಿAದ ಮನೆಯಿಂದ ನಾಪತ್ತೆಯಾಗಿದ್ದು ಬುಧವಾರ ಸಂತೆಕಟ್ಟೆ ನಿವಾಸಿ ಪುಷ್ಪರಾಜ್ ಅಮೀನ್ ರವರ ಡ್ರೈನೇಜ್ ಪಿಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪುಷ್ಪರಾಜ್ ಅಮೀನ್ ಮುಂಬೈನಲ್ಲಿ ವಾಸವಾಗಿದ್ದು ಆಗೊಮ್ಮೆ ಈಗೊಮ್ಮೆ ಪಡುಪಣಂಬೂರಿನಲ್ಲಿರುವ ತಮ್ಮ ಮನೆಗೆ ಬಂದು ಹೋಗುತ್ತಿದ್ದರು ಎನ್ನಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ಪುಷ್ಪರಾಜ್ ಅಮೀನ್ ಸಂತೆಕಟ್ಟೆಯ ತಮ್ಮ ಮನೆಗೆ ಬಂದಿದ್ದು ಬುಧವಾರ ಬೆಳಿಗ್ಗೆ ಮನೆಯವರು ಮನೆಯ ಹಿಂದುಗಡೆ ಇರುವ ಸಣ್ಣ ಡ್ರೈನೇಜ್ ಫಿಟ್ ನೋಡುವಾಗ ಮಹಿಳೆ ನಾಗಮ್ಮ ಶೆಟ್ಟಿಗಾರ್ ಕೊಳೆತ ಶವ ಮಡಚಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೂಡಲೇ ಅವರು ಮುಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಡ್ರೈನೇಜ್ ಪಿಟ್ ಮೇಲೆ ತಗಡಿನ ಶೀಟ್ ಇಟ್ಟಿದ್ದು ಕಾಲು ಜಾರಿ ಪಿಟ್ ಒಳಗಡೆ ಬಿದ್ದಿರಬಹುದು ಎಂದು ಶಂಕಿಸಲಾಗಿದ್ದರೂ ಸಣ್ಣ ಡ್ರೈನೇಜ್ ಪಿಟ್ ಒಳಗಡೆ ಮಹಿಳೆ ಬಿದ್ದಿರುವ ಬಗ್ಗೆ ಹಾಗೂ ಶವ ಪತ್ತೆಯಾದ ಸ್ಥಿತಿ ನೋಡಿದರೆ ಶಂಕೆ ವ್ಯಕ್ತವಾಗಿದೆ. ಮಹಿಳೆ ಡ್ರೈನೇಜ್ ಫಿಟ್ ಒಳಗಡೆ ಬಿದ್ದು ಕೆಲದಿನಗಳಾಗಿದ್ದು ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸ್ಥಳಕ್ಕೆ ಮುಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ