ಹೆಬ್ರಿ: ಬಂಟರ ಸಮುದಾಯ ಭವನ ಲೋಕಾರ್ಪಣೆ ಗೊಳಿಸುವ ಮೂಲಕ ಪೆರ್ಡೂರಿಗೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ ಎಂದು ಎಂ ಆರ್ ಜಿ ಗ್ರೂಪ್ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಹೇಳಿದರು.
ಅವರು ಫೆ 11ರಂದು ಪೆರ್ಡೂರು ಬಂಟರ ಸಂಘ ಪೆರ್ಡೂರು ಮಂಡಲ ವತಿಯಿಂದ ಸುಮಾರು 7 ಕೋಟಿ ರು. ವೆಚ್ಚದಲ್ಲಿ ಉಡುಪಿ-ಆಗುಂಬೆ ರಾ.ಹೆದ್ದಾರಿಯ ಪೆರ್ಡೂರಿನಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ಶ್ರೀಮತಿ ಸರ್ವಾಣಿ ಪಳ್ಳಿ ಶ್ರೀನಿವಾಸ ಹೆಗ್ಡೆ ಬಂಟರ ಸಮುದಾಯ ಭವನ ಲೋಕಾರ್ಪಣೆ ಗೊಳಿಸಿ ಮಾತನಾಡಿದರು.
ಬಂಟರು ಜಾಗತಿಕವಾಗಿ ಗುರುತಿಸಲ್ಪಟ್ಟಿದ್ದು ಎಲ್ಲಾ ರಂಗಗಳಲ್ಲಿಯೂ ಸಾಧನೆ ಮಾಡಿರುವವರು ಇದ್ದಾರೆ, ಆದರೆ ಎಂದಿಗೂ ಜನ್ಮಭೂಮಿ ಮರೆಯದೇ ಕೊಡುಗೆ ಕೊಟ್ಟಾಗ ಜನ್ಮಭೂಮಿಯ ಋಣ ಸಂದಾಯವಾಗುತ್ತದೆ ಎಂದರು.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ ಜಯಪ್ರಕಾಶ್ ಹೆಗ್ಡೆ ಮಾತನಾಡಿ ರಾಜ್ಯದಲ್ಲಿ ಬಂಟರ ಸಂಖ್ಯೆಯು ಕಡಿಮೆಯಾಗುತಿದ್ದು ಉದ್ಯೋಗಕ್ಕಾಗಿ ವಿದೇಶಗಳಿಗೆ ಸಾಗುತಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಉದ್ದಿಮೆಗಳನ್ನು ಕಟ್ಟಿ ಮುಂದಿನ ಜನಾಂಗದಕ್ಕೆ ಉದ್ಯೋಗಾವಕಾಶಗಳನ್ನು ಕಲ್ಪಿಸಿ ಎಂದರು. ಎ.ಬಿ ಶೆಟ್ಟಿ ಹಾಗೂ ಸುಂದರಾಂ ಶೆಟ್ಟಿ ಯವರ ಸಾಧನೆಗಳನ್ನು ಕೊಂಡಾಡಿದರು.
ಪೆರ್ಡೂರು ಬಂಟರ ಸಂಘ ಅಧ್ಯಕ್ಷ ಶಾಂತಾರಾಮ ಸೂಡ ಪ್ರಸ್ತಾವಿಕ ಮಾತನಾಡಿ 1991ರ ಬಂಟರ ಭವನದ ಕನಸು ನನಾಸಗುತ್ತಿರುವುದು ಸಂತಸವಾಗುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಹೆಚ್ ಮಂಜುನಾಥ ಭಂಡಾರಿ ಮಾತನಾಡಿ ಶ್ರೀಮತಿ ಸರ್ವಾಣಿ ಪಳ್ಳಿ ಶ್ರೀನಿವಾಸ ಹೆಗ್ಡೆ ಯವರ ಮಾರ್ಗದರ್ಶನ ನನ್ನ ಬದುಕಿಗೆ ಅಪಾರವಾಗಿದೆ ಎಂದರು.ಸಂಘದ ಅಧ್ಯಕ್ಷ ಶಾಂತರಾಂ ಸೂಡ ಅವರ ನಾಯಕತ್ವವನ್ನು ಕೊಂಡಾಡಿದರು.
ಮುಂಬೈ ನ ರಾಮಕೃಷ್ಣ ಗ್ರೂಪ್ ಆಫ್ ಹೋಟೆಲ್ ನ ಚಂದ್ರಶೇಖರ ಶೆಟ್ಟಿ,ನಟರಾಜ್ ಹೆಗ್ಡೆ ,ಮಾಹೆ ಯ ಕುಲಾಧಿಪತಿ ಎಚ್ ಎಸ್ ಬಳ್ಳಾಲ್
ಮಾತನಾಡಿದರು.
ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಬಂಟರ ಸಂಘಗಳ ಒಕ್ಕೂಟ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಬ್ರಹ್ಮಾವರ ಬಂಟರ ಸಂಘ ಮಾಜಿ ಅಧ್ಯಕ್ಷ ಶೇಡಿಕೊಡ್ಲು ವಿಠಲಶೆಟ್ಟಿ, , ವೀಣಾ ಸತೀಶ್ಚಂದ್ರ ಹೆಗ್ಡೆ,ಸಿಟಿ ಆಸ್ಪತ್ರೆ ಮಂಗಳೂರು ಆಡಳಿತ ನಿರ್ದೇಶಕ ಡಾ. ಕೈಲ್ಕೆರೆ ಭಾಸ್ಕರ ಶೆಟ್ಟಿ, ಪಳ್ಳಿ ಪಜೆಕೊಡಂಗೆ ಲೀಲಾವತಿ ಎಸ್ ಹೆಗ್ಡೆ, ನಿವೃತ್ತ ವೈದ್ಯಾಧಿಕಾರಿ ಡಾ. ಎ ಮನೋರಂಜನದಾಸ್ ಹೆಗ್ಡೆ, ಸಿ ಎ ಎನ್ ಬಿ ಶೆಟ್ಟಿ,, , ಕಾಪು ಶಾಸಕ. ಸುರೇಶ್ ಶೆಟ್ಟಿ ಗುರ್ಮೆ, ಅದಾನಿ ಗ್ರೂಪ್ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಉದ್ಯಮಿ ಗಳಾದ ಸುಧಾಕರ ಶೆಟ್ಟಿ,ದಿನೇಶ್ ಹೆಗ್ಡೆ ಬೆಂಗಳೂರು, ಕೆ.ರಾಜರಾಮ ಹೆಗ್ಡೆ ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಸಂಚಾಲಕ ಶಿವಪ್ರಸಾದ್ ಹೆಗ್ಡೆ, ನಮಿತಾ ಉದಯಕುಮಾರ್ ಶೆಟ್ಟಿ, ಉಪಾಧ್ಯಕ್ಷರಾದ ದಿನೇಶ್ಚಂದ್ರ ಶೆಟ್ಟಿ ಬಜ್ಜಾಲು, ರಾಜಕುಮಾರ್‌ಶೆಟ್ಟಿ ದೊಡ್ಡನೆ, ಶಿವರಾಮ ಶೆಟ್ಟಿ ಬೆಳ್ಳರ್ಪಾಡಿ, ಮಹೇಶ್ ಶೆಟ್ಟಿ ಪೈಬೆಟ್ಟು, ಕೋಶಾಧಿಕಾರಿ ಪ್ರಮೋದ್ ರೈ ಪಳಜೆ , ಉಪಸ್ಥಿತರಿದ್ದರು.
.ಉಪಸ್ಥಿತರಿದ್ದರು ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಶೆಟ್ಟಿ ಕುತ್ಯಾರುಬೀಡು ಸ್ವಾಗತಿಸಿದರು.
ವಿಜಯಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ