ಕಾರ್ಕಳ :ಇತ್ತೀಚೆಗೆ ನಡೆದ ಶ್ರೀ ಮಹಾಲಿಂಗೇಶ್ವರ ಯುವಕ ಮಂಡಲ ಪತ್ತೊಂಜಿಕಟ್ಟೆ ಪೆರ್ವಾಜೆ ಇದರ ವಾರ್ಷಿಕ ಮಹಾಸಭೆಯಲ್ಲಿ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಹಿರಿಯ ಸದಸ್ಯರಾದ ಸದಾಶಿವ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ದಿನೇಶ್ ಕೊರಳಕೋಡಿ ಇವರು ಸವಾ9ನುಮತದಿಂದ ಆಯ್ಕೆಯಾಗಿದ್ದಾರೆ. ದಿನೇಶ್ ಕೊರಳಕೋಡಿ ಇವರು ಈ ಹಿಂದೆ ಸಂಘದ ಅಧ್ಯಕ್ಷರಾಗಿ ಹಾಗೂ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಉಪಾಧ್ಯಕ್ಷರಾಗಿ ನಿತ್ಯಾನಂದ ಭಂಡಾರಿ, ಕಾರ್ಯದರ್ಶಿ ಸಂದೇಶ್ ಕೋಟ್ಯಾನ್, ಜತೆ ಕಾರ್ಯದರ್ಶಿ ರವೀಂದ್ರ ಸಫಲಿಗ, ಕೋಶಾಧಿಕಾರಿ ಪ್ರಸನ್ನ ರಾವ್, ಕ್ರೀಡಾ ಕಾರ್ಯದರ್ಶಿ ಸುರೇಶ್ ಸುವರ್ಣ, ಸಾಂಸ್ಕೃತಿಕ ಕಾಯ9ದಶಿ9ಗಳಾಗಿ ಸದಾನಂದ ಗುತ್ತಬೈಲು, ಸುಭಾಷ್ ಸುವರ್ಣ, ಲೆಕ್ಕಪರಿಶೋಧಕರಾಗಿ ಸದಾಶಿವ ಶೆಟ್ಟಿ ಇವರು ಆಯ್ಕೆಯಾದರು. ಗೌರವ ಸಲಹೆಗಾರರಾಗಿ ಗಣೇಶ್ ಎಂ. ಶೆಟ್ಟಿ, ಹೆನ್ರಿ ಸಾಂತ್ ಮಯೋರ್, ನಜೀರ್ ಅಹಮ್ಮದ್, ಅಬ್ದುಲ್ ರಹೀಂ, ಚಂದ್ರಹಾಸ ಸುವರ್ಣ ಹಾಗೂ 15 ಮಂದಿ ಸದಸ್ಯರನ್ನೊಳಗೊಂಡ ಕಾಯ9ಕಾರಿ ಸಮಿತಿಯನ್ನು ರಚಿಸಲಾಯಿತು.