Share this news

ಮಂಗಳೂರು: ಕರ್ನಾಟಕದ ಕರಾವಳಿ ಭಾಗದಲ್ಲಿ ಕಳೆದ ಎರಡು ವಾರಗಳಿಂದ ಸುರಿಯುತ್ತಿದ್ದ ಮಳೆ ಕೊಂಚ ಕಡಿಮೆಯಾಗಿದೆ. ಆದರೆ ಮಂಗಳೂರಿನಲ್ಲಿ ಪ್ರಕ್ಷುಬ್ಧಗೊಂಡ ಕಡಲು ಮಳೆ ತಗ್ಗಿದರೂ ಕಡಲ ಅಬ್ಬರ ನಿಲ್ಲದ ಹಿನ್ನಲೆಯಲ್ಲಿ ಪ್ರವಾಸಿಗರಿಗೆ ಬೀಚ್‌ಗಳಿಗೆ  ನಿರ್ಬಂಧಿಸಲಾಗಿದೆ.

ಮಂಗಳೂರಿನ ಎಂಟು ಬೀಚ್ ಗಳಿಗೆ ನಿರ್ಬಂಧ ವಿಧಿಸಿ ಸುತ್ತೋಲೆ ಹೊರಡಿಸಲಾಗಿದೆ. ನಿರ್ಬಂಧ ಇದ್ದರೂ ಸಹ ಪ್ರವಾಸಿಗರು ಮಂಗಳೂರಿನ ಪಣಂಬೂರು ಬೀಚ್ ಸಮುದ್ರ ತೀರಕ್ಕೆ ಆಗಮಿಸುತ್ತಿದ್ದಾರೆ. ಎಚ್ಚರಿಕೆಯ ಸೂಚನೆ ನಡುವೆಯೂ ಪ್ರವಾಸಿಗರು ಕಡಲಿಗೆ ಇಳಿಯುತ್ತಿದ್ದು, ಭದ್ರತಾ ಸಿಬ್ಬಂದಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಯಾರೂ ಬೀಚ್‌ಗೆ ಬರಬಾರದು ಎಂದು ಅಡ್ಡಲಾಗಿ ಹಗ್ಗ ಕಟ್ಟಿದ್ದರೂ ಸಹ ಪ್ರವಾಸಿಗರು ಅದನ್ನು ದಾಟಿ ಬೀಚಿಗೆ ಆಗಮಿಸುತ್ತಿದ್ದಾರೆ. ಇದರಿಂದ ಪೊಲೀಸರು, ಸಮುದ್ರ ತೀರದಿಂದ ಪ್ರವಾಸಿಗರನ್ನು ಚದುರಿಸುತ್ತಿದ್ದಾರೆ. ಅಲ್ಲದೇ ಲೈಫ್ ಗಾರ್ಡ್ ಸಿಬ್ಬಂದಿ ಸಹ ಸೈರನ್ ಹಾಕಿ ಕಡಲಿಗೆ ಇಳಿಯದಂತೆ ಎಚ್ಚರಿಕೆ ನೀಡುತ್ತಿದ್ದಾರೆ. ಅಪಾಯಕಾರಿ ಸ್ಥಳಗಳಲ್ಲಿ ರೀಲ್ಸ್, ಸೆಲ್ಫಿ ತೆಗೆಯದಂತೆಯೂ ನಿರ್ಬಂಧಿಸಲಾಗಿದೆ. ಈಗಾಗಲೇ ಎಂಟು ಬೀಚ್ ಗಳಲ್ಲಿ 24 ಜನ ಹೋಂ ಗಾರ್ಡ್ಸ್ ನೇಮಕ ಮಾಡಲಾಗಿದೆ.

Leave a Reply

Your email address will not be published. Required fields are marked *