ಕಾರ್ಕಳ : ವಾಕ್ ಮತ್ತು ಶ್ರವಣದೋಷ ಅಥವಾ ಇನ್ನಾವುದೇ ನ್ಯೂನತೆ ಬೆಳೆಯುವ ಸಣ್ಣ ಮಕ್ಕಳಲ್ಲಿ ಕಂಡುಬAದಲ್ಲಿ ಅದನ್ನು ಅತೀ ಶೀಘ್ರದಲ್ಲಿ ಗುರುತಿಸಿ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಿ ಗುಣ ಪಡಿಸಲು ಮಗುವಿನ ಚಲನವಲನಗಳನ್ನು ಪ್ರಾರಂಭದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡುವುದು ಅತೀ ಅವಶ್ಯಕವೆಂದು ಯೆನಪೋಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ಸ್ಪೀಚ್‌ಥೆರಪಿ ವಿಭಾಗದ ಅಸಿಸ್ಟೆಂಟ್ ಪ್ರೊ. ಪಾವನಾ ಹೇಳಿದರು.
ಅವರು ಕಾರ್ಕಳ ಚೇತನಾ ವಿಶೇಷ ಶಾಲೆಯಲ್ಲಿ ವಿಶೇಷಚೇತನರ ಹೆತ್ತವರಿಗೆ ನೀಡಿದ ಮಾಹಿತಿ ಕಾರ್ಯಗಾರದಲ್ಲಿ ಮಾತನಡಿದರು. ಮಗುವಿನ ವಯಸ್ಸಿಗೆ ತಕ್ಕಂತೆ ಮಾತಿನ ಸಮಸ್ಯೆ, ತೊದಲುವಿಕೆ, ತಪ್ಪು ಉಚ್ಚಾರಣೆ, ಕಡಿಮೆ ಧ್ವನಿಗಳ ಬಗ್ಗೆ ಸೂಕ್ಷö್ಮವಾಗಿ ಗಮನಿಸಿ ಇಂತಹ ಮಕ್ಕಳೊಂದಿಗೆ ಹೆಚ್ಚು ಹೆಚ್ಚು ಆಕರ್ಷಕ ರೀತಿಯಲ್ಲಿ ಮಾತನಾಡುವುದು, ಏರಿಳಿತದ ಧ್ವನಿಯಲ್ಲಿ ಮಾತನಾಡುವುದು, ವಸ್ತುಗಳನ್ನು ಗುರುತಿಸಿ ಜೋಡಿಸುವಂತಹ ಕೆಲಸಗಳಲ್ಲಿ ಅವರನ್ನು ತೊಡಗಿಸಬೇಕು, ಮಕ್ಕಳಿಗೆ ಮೊಬೈಲ್ ಹಾಗೂ ಟಿವಿಯನ್ನು ನೋಡುವುದು ಕಡಿಮೆ ಮಾಡದಿದ್ದಲ್ಲಿ ಮಗು ಅದರಲ್ಲಿ ತಲ್ಲಿನರಾಗಿ ಮಾತನಾಡುವುದನ್ನೇ ಕಡಿಮೆ ಮಾಡುತ್ತದೆ ಎಂದು ತಿಳಿಸಿದರು.
ಶಾಲಾ ಸಂಚಾಲಕರಾದ ರಘುನಾಥ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಚೇತನಾ ವಿಶೇಷ ಶಾಲೆಯಲ್ಲಿ ಯೆನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ಸ್ಪೀಚ್‌ಥೆರಪಿ ಹಾಗೂ ಫಿಸಿಯೋಥೆರಪಿ ವಿಭಾಗದ ಸಹಯೋಗದೊಂದಿಗೆ ಪ್ರತೀ ಗುರುವಾರ ವಿಶೇಷ ಮಕ್ಕಳ ವಾಕ್ ಮತ್ತು ಶ್ರವಣದೋಷದ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಅವಶ್ಯಕ ಮಕ್ಕಳ ಪೋಷಕರುಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಯೆನಪೋಯ ಫಿಸಿಯೋಥೆರಪಿ ಕಾಲೇಜಿನ ಉಪ ಪ್ರಾಂಶುಪಾಲ ಆಸಿರ್ ಜೋನ್ ಹಾಗೂ ಸ್ಪೀಚ್‌ಥೆರಪಿ ವಿಭಾಗದ ಕ್ಲಿನಿಕಲ್ ಸುಪರ್‌ವೈಸರ್ ಸಾಸ್ತಿಕ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಯಿನಿ ಹೇಮಲತಾ ಇವರು ಸ್ವಾಗತಿಸಿದರು. ಕೋಶಾಧಿಕಾರಿ ವಿಜಯ್ ಕುಮಾರ್ ಇವರು ಧನ್ಯವಾದವಿತ್ತರು.