ನವದೆಹಲಿ: ಮೋದಿ ಸರ್‌ನೇಮ್ ಕೇಸ್‌ನಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಎದುರಿಸುತ್ತಿರುವ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಂಸದ ರಾಹುಲ್ ಗಾಂಧಿ ಈಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ರಾಹುಲ್ ಗಾಂಧಿಗೆ ವಿಧಿಸಿದ್ದ 2 ವರ್ಷ ಜೈಲು ಶಿಕ್ಷೆ ತೀರ್ಪನ್ನು ತಡೆ ಹಿಡಿಯಲು ಗುಜರಾತ್ ಹೈಕೋರ್ಟ್ ತಿರಸ್ಕರಿಸಿತ್ತು. ಈ ಹಿನ್ನೆಲೆ ರಾಹುಲ್ ಗಾಂಧಿ ಈಗ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಈ ಮಧ್ಯೆ, ಶಿಕ್ಷೆಯನ್ನು ಪ್ರಶ್ನಿಸುವ ಸಲುವಾಗಿ ರಾಹುಲ್ ಗಾಂಧಿ ಅವರ ತಂಡವು ಸುಪ್ರೀಂ ಕೋರ್ಟ್ನ ಬೇಸಿಗೆ ರಜೆಯ ಅವಧಿಯ ಮುಕ್ತಾಯಕ್ಕಾಗಿ ಕಾಯುತ್ತಿತ್ತು. ಈ ಮಧ್ಯೆ, ಪೂರ್ಣೇಶ್ ಮೋದಿ ಅವರು ಸುಪ್ರೀಂ ಕೋರ್ಟ್ನಲ್ಲಿ ಕೇವಿಯಟ್ ಸಲ್ಲಿಸಿದ್ದು, ರಾಹುಲ್ ಗಾಂಧಿ ಅಥವಾ ಯಾವುದೇ ಸಂಬAಧಿತ ಪಕ್ಷವು ಗುಜರಾತ್ ಹೈಕೋರ್ಟ್ನ ತೀರ್ಪನ್ನು ಪ್ರಶ್ನಿಸಿದಾಗ ತಮ್ಮ ವಾದವನ್ನೂ ಆಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಪೂರ್ಣೇಶ್ ಮೋದಿ ಅವರಿಗೆ ತಮ್ಮ ಪರ ವಾದ ಮಂಡಿಸಲು ಅವಕಾಶ ನೀಡದೆ ನ್ಯಾಯಾಲಯ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಕೇವಿಯಟ್ ಒತ್ತಿ ಹೇಳಿದೆ.