Share this news

ಮೂಡಬಿದಿರೆ: ಪರಮ ಪುಣ್ಯ ಪವಿತ್ರ ಸಾನಿಧ್ಯ ಮೂಡಬಿದಿರೆ ಶ್ರೀ ಕ್ಷೇತ್ರ ಇಟಲ ಸೋಮನಾಥೇಶ್ವರ ದೇವಸ್ಥಾನದ ಪುಣ್ಯ ಚರಿತ್ರೆಯು ಕಥಾರೂಪವಾಗಿ ಕರಾವಳಿ ಗಂಡುಕಲೆ ಯಕ್ಷಗಾನ ಪ್ರದರ್ಶನವಾಗಿ ಹೊರಹೊಮ್ಮಲಿದ್ದು ಶ್ರೀ ಇಟಲ ಕ್ಷೇತ್ರ ಮಹಾತ್ಮೆ ಎಂಬ ಹೆಸರಿನ ಕಥಾನಕವಾಗಿ ಪ್ರದರ್ಶನಗೊಳ್ಳಲಿದೆ.

ಈ ಯಕ್ಷಗಾನ ಕಥಾನಕದ ಬಿಡುಗಡೆ ಸಮಾರಂಭವು ಜು.16 ರಂದು ಆದಿತ್ಯವಾರ ಬೆಳಿಗ್ಗೆ 9.ಗಂಟೆಗೆ ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ .ಪಣಪಿಲ ಅರಮನೆ ಬಿ .ವಿಮಲ್ ಕುಮಾರ್, ಜಿರ್ಣೊದ್ದಾರ ಸಮಿತಿ ಕಾರ್ಯಧ್ಯಕ್ಷ ಸುಕೇಶ್ ಶೆಟ್ಟಿ, ಪ್ರಮೋದ್ ಆರಿಗ, ಕ್ಷೇತ್ರದ ಪುರೋಹಿತರು, ಅರ್ಚಕ ವರ್ಗ, ಮಾಗಣೆಗೆ ಸಂಬAಧಪಟ್ಟ ಎಲ್ಲಾ ಗ್ರಾಮಸಮಿತಿ ಸಂಚಾಲಕರು ಸದಸ್ಯರುಗಳು ಹಾಗೂ ಅತಿಥಿ ಗಣ್ಯರು ಭಾಗವಹಿಸಲಿದ್ದಾರೆ.

ಈ ಶುಭ ಸಂದರ್ಭದಲ್ಲಿ ಊರ ಪರವೂರ ಭಕ್ತಾಭಿಮಾನಿಗಳು ಭಾಗಿಯಾಗಿ ಶ್ರೀ ದೇವರ ಪ್ರಸಾದ ಸ್ವೀಕರಿಸಿ ನೂತನ ಪ್ರಸಂಗಕ್ಕೆ ಶುಭ ಹಾರೈಸಬೇಕೆಂದು ಈ ಮೂಲಕ ವಿನಂತಿಸಲಾಗಿದೆ.

Leave a Reply

Your email address will not be published. Required fields are marked *