Share this news

ಮೂಡುಬಿದಿರೆ :ಒಂದು ರಾಷ್ಟ್ರವನ್ನು ಕಟ್ಟಲು ಉತ್ತಮ ನಾಯಕತ್ವ ಸಹಕಾರಿಯಾಗುತ್ತದೆ. ಒಬ್ಬ ನಾಯಕನಲ್ಲಿ ಶಿಸ್ತು, ಶ್ರದ್ಧೆ, ಕಠಿಣ ಪರಿಶ್ರಮ ತನ್ನ ಜವಾಬ್ದಾರಿಯ ಅರಿವಿರಬೇಕು. ಮುಂದೆ ದೊಡ್ಡ ಜವಬ್ದಾರಿ ಹೊಂದುವವರು ನೀವಾಗಲಿದ್ದೀರಿ. ಆ ಸಂದರ್ಭದಲ್ಲಿ ತಾಳ್ಮೆ ಎನ್ನುವುದು ತುಂಬಾ ಮುಖ್ಯ. ತಾಳ್ಮೆಯೊಂದಿದ್ದರೆ ಉತ್ತಮ ನಾಯಕನಾಗಲು ಸಾಧ್ಯವಾಗುತ್ತದೆ. ಕಾನೂನು ಎಂದರೆ ಸಾಮಾಜಿಕ ಜೀವನದಲ್ಲಿ ಹೇಗೆ ಜೀವಿಸಬೇಕು, ದಿನನಿತ್ಯದ ನಮ್ಮ ಕಾರ್ಯಚಟುವಟಿಕೆಗಳೇ ಕಾನೂನು ಎಂದು ಮೂಡುಬಿದಿರೆಯ ವಕೀಲ ದಿವಿಜೇಂದ್ರ ಕುಮಾರ್ ಹೇಳಿದರು.

ಅವರು ಎಕ್ಸಲೆಂಟ್ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ಶಾಲಾ ಸಂಸತ್ತಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತಾನಾಡಿದರು. ಶಾಲಾ ಸಂಸತ್ತು ಎಲ್ಲಾ ಶಾಲೆಗಳಲ್ಲಿ ಅತ್ಯವಶ್ಯಕವಾಗಿ ಇರಲೇಬೇಕು. ಉತ್ತಮ ನಾಗರೀಕನಾಗಲು ಇದು ಸಹಕಾರಿಯಾಗುತ್ತದೆ. ಅಲ್ಲದೆ ಎಲ್ಲರಲ್ಲಿಯೂ ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ. ಅಂತಹ ನಾಯಕತ್ವ ನಿಮ್ಮೆಲ್ಲರದ್ದಾಗಲಿ ಎಂದು ಚುನಾಯಿತ ಶಾಲಾ ಸಂಸತ್ತಿನ ನಾಯಕರುಗಳಿಗೆ ಶುಭ ಹಾರೈಸಿದರು.

ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ, ಜೀವನದಲ್ಲಿ ಬರುವ ಕಷ್ಟಗಳನ್ನು ಮೆಟ್ಟಿನಿಲ್ಲುವುದೇ ನಿಜವಾದ ನಾಯಕನ ಲಕ್ಷಣ. ಸಕ್ಕರೆಯಂತೆ ಸಿಹಿಯಾಗಿರಬೇಕು. ಅಂತಹ ಉತ್ತಮ ನಾಯಕರು ನೀವಾಗಿ ಎಂದು ಶುಭ ಹಾರೈಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಮಾತನಾಡಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣವನ್ನು ನಾಯಕನಾದವನು ಹೊಂದಬೇಕು. ಜೊತೆಗೆ ಮನುಷ್ಯತ್ವ ಮಾನವೀಯತೆ ಬಹಳ ಮುಖ್ಯ. ಎಲ್ಲಾ ಅಧ್ಯಾಪಕರು ನಿಮಗೆ ಸ್ಪೂರ್ತಿಯಾಗಲಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಿಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿ ಉತ್ತಮ ನಾಯಕರಾಗಿ ಎಂದು ಶಾಲಾ ಸಂಸತ್ತಿನ ನಾಯಕರುಗಳಿಗೆ ಶುಭ ಹಾರೈಸಿದರು.

ಮುಖ್ಯ ಅತಿಥಿ ದಿವಿಜೇಂದ್ರ ಕುಮಾರ್ ಶಾಲಾ ಸಂಸತ್ತಿನ ನಾಯಕ ನೀರಜ್ ವಿರೋಧ ಪಕ್ಷದ ನಾಯಕಿ ಶ್ಯಾಮಿಲಿ ಹೆಗ್ದೆ ಹಾಗೂ ಚುನಾಯಿತರಾದ ನಾಯಕರುಗಳಿಗೆ ಸಂಸ್ಥೆಯ ಪದನಾಮ ಹಾಗೂ ಜವಬ್ದಾರಿಗಳನ್ನು ಹಂಚಿಕೆ ಮಾಡಿದರು. ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್ ಪ್ರತಿಜ್ಞಾ ವಿಧಿ ಬೋಧಿಸಿದರು. ಸಹ ಮುಖ್ಯೋಪಾಧ್ಯಾಯ ಜಯಶೀಲ ಶಾಲಾ ಸಂಸತ್ತಿನ ನಾಯಕರುಗಳ ಜವಬ್ದಾರಿಗಳನ್ನು ವಾಚಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಸಂಸತ್ತಿನ ಆಡಳಿತ ಹಾಗೂ ವಿರೋಧ ಪಕ್ಷಗಳ ನಾಯಕರುಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ಆದಿತ್ಯ ಕಾರ್ಯಕ್ರಮ ನಿರೂಪಿಸಿದರು

Leave a Reply

Your email address will not be published. Required fields are marked *