Share this news

ಬೆಂಗಳೂರು:ಜನರ ಅಹವಾಲುಗಳಿಗೆ ತ್ವರಿತವಾಗಿ ಸ್ಪಂದಿಸಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಂದಾಯ ಆಯುಕ್ತಾಲಯ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಕುರಿತು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ ಅವರು ನಡಾವಳಿ ಹೊರಡಿಸಿದ್ದು, ಆಡಳಿತದ ಹಿತದೃಷ್ಟಿಯಿಂದ ಕೆಲಸದ ಪ್ರಕ್ರಿಯೆಗಳನ್ನು ಸರಳೀಕರಣಗೊಳಿಸುವ ಮತ್ತು ದಕ್ಷತೆಯನ್ನು ಹೆಚ್ಚಿಸುವ ಹಾಗೂ ಅಧಿಕಾರ ವಿಕೇಂದ್ರಿಕರಣ ಮಾಡುವ ಉದ್ದೇಶದಿಂದ ನಾಗರೀಕ ಸ್ನೇಹಿಯಾಗಿ ಕಾರ್ಯನಿರ್ವಹಿಸಲು ರಾಜ್ಯ ಮಟ್ಟದಲ್ಲಿ ಕಂದಾಯ ಆಯುಕ್ತಾಲಯವನ್ನು ಹಾಗೂ ಐಎಎಸ್ ದರ್ಜೆಯ ಕಂದಾಯ ಆಯುಕ್ತರು ಎಂಬ ಹುದ್ದೆಯನ್ನು ಸೃಜಿಸಿ ಆದೇಶ ಹೊರಡಿಸಲಾಗಿದೆ.ರಾಜ್ಯದ ಜನರಿಗೆ ತ್ವರಿತ ಸ್ಪಂದನೆಗಾಗಿ ಕಂದಾಯ ಆಯುಕ್ತಾಲಯ ಅಸ್ತಿತ್ವಕ್ಕೆ ಬಂದಿದ್ದು, 8 ಕಚೇರಿಗಳು ವಿಲೀನವಾಗಿವೆ.

ಕಂದಾಯ ಇಲಾಖೆಯ ವ್ಯಾಪ್ತಿಗೆ ಒಳಪಟ್ಟ ಅಟಲ್ ಜೀ ಜನಸ್ನೇಹಿ ನಿರ್ದೇಶನಾಲಯ,ಸಾಮಾಜಿಕ ಭದ್ರತೆ ಮತ್ತು ಪಿಂಚಣೆಗಳ ನಿರ್ದೇಶನಾಲಯ,ಭೂಮಿ ಉಸ್ತುವಾರಿ ಕೋಶ,ಕಂದಾಯ ವಿಶೇಷ ಕೋಶ,ಕಂದಾಯ ಗ್ರಾಮಗಳ ರಚನೆ ಕೋಶ,ಲೆಕ್ಕಪರಿಶೋಧನ ಶಾಖೆ,ಮನೆ ಬಾಡಿಗೆ ನಿಯಂತ್ರಕರ ಕಚೇರಿ ಹಾಗೂ ಜಾರಿದಳ, ಬೆಂಗಳೂರು ಸೇರಿ 8 ಕಚೇರಿಗಳು ಕಂದಾಯ ಆಯುಕ್ತಾಲಯದೊಂದಿಗೆ ವಿಲೀನವಾಗಲಿವೆ. ಇದರ ಜತೆಗೆ ಸಾರ್ವಜನಿಕರಿಗೆ ಜಿಲ್ಲಾಮಟ್ಟದ ಹಾಗೂ ರಾಜ್ಯ ಮಟ್ಟದ ಸೇವೆಗಳು ನಿಗದಿತ ಕಾಲಮಿತಿಯಲ್ಲಿ ಲಭ್ಯವಾಗಬೇಕೆಂಬ ನಿಟ್ಟಿನಲ್ಲಿ ಕಂದಾಯ ಆಯುಕ್ತಾಲಯವನ್ನು ಮೇಲ್ಕಂಡ ರೂಪುರೇಷೆಗಳೊಂದಿಗೆ ಸ್ಥಾಪಿಸಿ ಕಾರ್ಯಗತಗೊಳಿಸಲು ಕಂದಾಯ ಆಯುಕ್ತಾಲಯದ 07 ವಿಭಾಗಗಳಿಗೆ ಸಂಬAಧಿಸಿದ ಒಟ್ಟು 274 ಹುದ್ದೆಗಳನ್ನು ವಿಲೀನಗೊಳಿಸಲಾಗಿದೆ.

ಪುಸ್ತುತ ಆಯುಕ್ತರು, ಭೂಮಾಪನ, ನಿರ್ದೇಶಕರು, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ವಿಭಾಗ, ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ ಇವರ ಆಡಳಿತ ವ್ಯಾಪ್ತಿಯಲ್ಲಿ ಹಾಗೂ ಭೂಮಿ ಮತ್ತು ಯುಪಿಒಆರ್ ವಿಭಾಗಗಳು, ಸರ್ಕಾರದ ಪ್ರಧಾನ ಕಾರ್ಯದರ್ಶಿ ಇವರ ಆಡಳಿತ ವ್ಯಾಪ್ತಿಯಲ್ಲಿ ಬರುತ್ತಿದ್ದವು. ಇನ್ನು ಮುಂದೆ ನಿರ್ದೇಶಕರು, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ವಿಭಾಗವು ಸರ್ಕಾರದ ಪ್ರಧಾನ ಕಾರ್ಯದರ್ಶಿ(ವಿವತ್ತು ನಿರ್ವಹಣೆ ಭೂಮಿ & ಯುಪಿಒಆರ್) ಇವರ ವ್ಯಾಪ್ತಿಗೆ ಹಾಗೂ ಇಲಾಖೆ ಇವರ ವ್ಯಾಪ್ತಿಗೆ ಯುಪಿಒಆರ್ ವಿಭಾಗವು ಸರ್ಕಾರದ ಪ್ರಧಾನ ಕಾರ್ಯದರ್ಶಿ ಅನುಬಂಧಗಳಲ್ಲಿ ತಿಳಿಸಿರುವ 07 ವಿಭಾಗಗಳ ಎಲ್ಲಾ ಕಛೇರಿ/ ಹುದ್ದೆಗಳನ್ನು ಕಂದಾಯ ಆಯುಕ್ತರ ವ್ಯಾಪ್ತಿಯೊಳಗೆ/ ಅಧೀನಕ್ಕೆ ತಂದು ಕಂದಾಯ ಆಯುಕ್ತಾಲಯವನ್ನು ಸ್ಥಾಪಿಸಿ ಸಾರ್ವಜನಿಕರಿಗೆ ಜಿಲ್ಲಾ ಕಂದಾಯ ಮಟ್ಟದ, ರಾಜ್ಯ ಮಟ್ಟದ ಸೇವೆಗಳು ನಿಗಧಿತ ಕಾಲಮಿತಿಯಲ್ಲಿ ಲಭ್ಯವಾಗಬೇಕೆಂದು ಆಯುಕ್ತಾಲಯವನ್ನು ಮೇಲ್ಕಂಡ ರೂಪುರೇಶೆಗಳೊಂದಿಗೆ ಸ್ವಾಪಿಸಿ ಕಾರ್ಯಗತಗೊಳಿಸಲು ಒಟ್ಟು 274 ಹುದ್ದೆಗಳನ್ನು ವಿಲೀನಗೊಳಿಸಲು ಉದ್ದೇಶಿಸಲಾಗಿದೆ.

Leave a Reply

Your email address will not be published. Required fields are marked *