ಹೆಬ್ರಿ : ಹೆಬ್ರಿ ತಾಲೂಕು ವರಂಗ ವಿಶ್ವಾಸನಗರ ಕೆಲ್‌ಟೆಕ್ ಎನರ್ಜಿಸ್ ಲಿಮಿಟೆಡ್ ಸಂಸ್ಥೆಯು ಪ್ರತೀ ವರ್ಷವೂ ಶಾಲೆ, ಸಂಘ ಸಂಸ್ಥೆ ಹಾಗೂ ದೇವಸ್ಥಾನಗಳಿಗೆ ಕೊಡುಗೆಗಳನ್ನು ನೀಡುತ್ತಿದ್ದು, ಅದರಂತೆ ಈ ಬಾರಿ ಹೆಬ್ರಿ ತಾಲೂಕಿನ ಮೂರು ಪ್ರಾಥಮಿಕ ಶಾಲೆಗಳಿಗೆ ಸುಮಾರು ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ ಗಳ ಬೆಲೆಬಾಳುವ ವಾಟರ್ ಕೂಲರ್ ಗಳನ್ನು ವಿತರಿಸಿದ್ದಾರೆ.
ಹೆಬ್ರಿ ತಾಲೂಕಿನ ಸರಕಾರಿ ಪ್ರಾಥಮಿಕ ಶಾಲೆಗಳಾದ, ಶಿವಪುರ ನಾಯರ್‌ಕೊಡು ಶಾಲೆ, ಹೆಬ್ರಿ ಕುಚ್ಚೂರು ಶಾಲೆ ಹಾಗೂ ಆರ್ಡಿ ಪ್ರಾಥಮಿಕ ಶಾಲೆಗಳಿಗೆ ವಾಟರ್ ಕೂಲರ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಯೂನಿಟ್ ಇಂಚಾರ್ಜ್ ತಿರುಮಲ, ಪ್ರಭಂದಕ ಶ್ರೀಶ ರಾವ್ ಹಾಗೂ ಸುದೀಪ್ ಉಪಸ್ಥಿತರಿದ್ದರು.