ಹೆಬ್ರಿ : ತಾಲೂಕಿನ ವರಂಗದ ವಿಶ್ವಾಸನಗರದ ಕೆಲ್‌ಟೆಕ್ ಸಂಸ್ಥೆಯ ವತಿಯಿಂದ ಮುನಿಯಾಲಿನ ವರಂಗ ಗ್ರಾಮ ಪಂಚಾಯಿತಿ ಕಛೇರಿಗೆ ಸುಮಾರು 25000 ರೂ. ಮೊತ್ತದ ಪ್ರಾಜೆಕ್ಟರ್ ಕೊಡುಗೆಯಾಗಿ ನೀಡಲಾಯಿತು.
ಈ ಪ್ರಾಜೆಕ್ಟರ್ ನಿಂದ ಪಂಚಾಯತ್‌ನಲ್ಲಿ ಜನಸಂಪರ್ಕ ಸಭೆ, ವಿಶೇಷ ಕಾರ್ಯಗಾರ ಇನ್ನಿತರ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರಿಗೆ ವಿಡಿಯೋ ಸಹಿತ ವಿವರಿಸಲು ಸಹಕಾರಿಯಾಗುತ್ತದೆ. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಭಂದಕರಾದ ಶ್ರೀಶ ರಾವ್, ಪ್ರಜ್ವಲ್ ಶೇರಿಗಾರ್ ಹಾಗೂ ಪಂಚಾಯತ್ ನ ಸದಸ್ಯರು ಉಪಸ್ಥಿತರಿದ್ದರು.
ಕೊಡುಗೆ ನೀಡಿದ ಸಂಸ್ಥೆಗೆ ಪಂಚಾಯತ್ ಅಧ್ಯಕ್ಷೆ ಉಷಾ. ಎಮ್. ಹೆಬ್ಬಾರ್ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಶಾಂತ್. ಕೆ ಅಭಿನಂದನೆ ಸಲ್ಲಿಸಿದ್ದಾರೆ.