ಹೆಬ್ರಿ:ಹೆಬ್ರಿ ತಾಲೂಕಿನ ವರಂಗ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕ ಸನತ್ ಎಂಬವರು ಸಂಘದ ಮುದ್ರಾಡಿ ಶಾಖೆಯ ಮುಂಭಾಗದ ಸರಕಾರಿ ಜಾಗದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಿಸಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸಂಘದ ಅಧ್ಯಕ್ಷ ಚಂದ್ರಶೇಖರ ಬಾಯರಿ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿ ಗೋಷ್ಟಿ ನಡೆಸಿದ ಅವರು ಸಂಘದ ಸದಸ್ಯರೊಬ್ಬರಿಗೆ 10 ಲಕ್ಷ ರೂ. ಸಾಲಕ್ಕೆ ಜಾಮೀನುದಾರರಾಗಿರುವ ಅವರು ಸಾಲ ಮರುಪಾವತಿಯಾಗದೇ ಇರುವುದರಿಂದ ಸಹಕಾರಿ ನಿಯಮದಂತೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಇಲ್ಲ. ಆದರೆ ಅವರು ಆಡಳಿತ ಮಂಡಳಿಯ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ಸಂಘದ ಹೆಚ್ಚುವರಿ ಕಾರ್ಯದರ್ಶಿಯವರ ಮೇಲಿನ ಆರೋಪ ಸತ್ಯಕ್ಕೆ ದೂರವಾಗಿದ್ದು, ಅವರಿಂದಲೇ ಸಂಘವು ಲಾಭದಾಯಕ ಹಾದಿಯಲ್ಲಿದೆ ಎಂದರು.ಸಂಘದ ವಿರುದ್ಧ ಅಪಪ್ರಚಾರ ನಡೆಸುವ ಸದಸ್ಯ ಸನತ್ ಅವರ ವರ್ತನೆಯ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಉಪಾಧ್ಯಕ್ಷ ಲಕ್ಷ್ಮಣ್ ಆಚಾರ್ಯ, ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ರವಿ ಪೂಜಾರಿ ಉಪಸ್ಥಿತರಿದ್ದರು.