Share this news

ಉಡುಪಿ: ನೇತ್ರಜ್ಯೋತಿ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಪ್ರಕರಣದ ಮೂವರು ಆರೋಪಿಗಳಲ್ಲಿ ಶಫಾಳ ತಂದೆ ನಿಷೇಧಿತ ಪಿಎಫ್‌ಐ ಕಾರ್ಯಕರ್ತ ಎಂದು ಬಜರಂಗದಳ ದಕ್ಷಿಣ ಪ್ರಾಂತ ಸಂಚಾಲಕ ಸುನಿಲ್ ಕೆ.ಆರ್. ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದರ ಹಿಂದೆ ವ್ಯವಸ್ಥಿತ ಷಡ್ಯಂತ್ರ ಕಾಣಿಸುತ್ತಿದೆ. ವೀಡಿಯೋ ಮಾಡಿ ಮುಸಲ್ಮಾನರಿಗೆ ಕಳುಹಿಸಿ ಹೆದರಿಸಲಾಗುತ್ತಿದೆ. ಬ್ಲ್ಯಾಕ್ ಮೇಲ್ ಜಿಹಾದ್ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು. ಪಿಎಫ್‌ಐ ಪ್ರಾಯೋಜಿತ ಷಡ್ಯಂತ್ರ ಇದರ ಹಿಂದೆ ಇದೆ. ಈ ಪ್ರಕರಣದ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಪ್ರಕರಣದಲ್ಲಿ ಭಾಗಿಯಾಗಿರುವ ಮೂವರು ಬಾಲಕಿಯರಲ್ಲಿ ಒಬ್ಬಳ ತಂದೆ ನಿಷೇಧಿತ ಸಂಘಟನೆಯಾದ ಪಿಎಫ್‌ಐನ ಕಾರ್ಯಕರ್ತ. ಮತ್ತೊಬ್ಬ ವಿದ್ಯಾರ್ಥಿನಿ ಹಸುವಿನ ಮಾಂಸ ಮಾರಾಟ ಮಾಡುತ್ತಿದ್ದ ಹೋಟೆಲ್ ಮಾಲೀಕನ ಮಗಳು. ಈ ಮೂವರು ವಿದ್ಯಾರ್ಥಿಗಳು ಜಿಹಾದ್ ಮಾಡುತ್ತಿದ್ದ ಕುಟುಂಬದಿAದ ಬಂದವರು. ಆರು ತಿಂಗಳಿAದ ಇಂತಹ ವಿಡಿಯೋ ರೆಕಾರ್ಡಿಂಗ್ ನಡೆಯುತ್ತಿತ್ತು ಎಂದು ಕಾಲೇಜಿನ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ ಎಂದರು.

Leave a Reply

Your email address will not be published. Required fields are marked *