Share this news

ನವದೆಹಲಿ: ಇನ್ನು ಮುಂದೆ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್​ ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರವನ್ನು ವಾರ್ಷಿಕ ಆಧಾರದ ಮೇಲೆ ಘೋಷಿಸುವುದನ್ನು ಕಡ್ಡಾಯಗೊಳಿಸಬೇಕು ಎಂಬ ಶಾಸನವನ್ನು ತರಲು ಸಂಸದೀಯ ಸಮಿತಿ ಉಭಯ ಸದನಕ್ಕೆ ಶಿಫಾರಸು ಮಾಡಿದೆ.

ಇದರ ಜತೆಗೆ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಕಾನೂನು ಮತ್ತು ನ್ಯಾಯ, ನೇಮಕಾತಿಗೆ ಸಂಬಂಧಿಸಿದ ವರದಿಯನ್ನು ಕೂಡ ನೀಡಲಾಗಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವವರು ಮತ್ತು ಸರ್ಕಾರಿ ನೌಕರರು ತಮ್ಮ ಆಸ್ತಿ ಮತ್ತು ಆದಾಯ ವಾರ್ಷಿಕ ವರದಿಯನ್ನು ಸಲ್ಲಿಸಬೇಕು ಎಂಬ ನಿಯಮದ ಬಗ್ಗೆ ಸದನಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ.

ಈ ವರದಿಯನ್ನು ಬಿಜೆಪಿ ರಾಜ್ಯಸಭಾ ಸದಸ್ಯ ಸುಶೀಲ್ ಕುಮಾರ್ ಮೋದಿ ಅವರ ಅಧ್ಯಕ್ಷತೆಯ ಸ್ಥಾಯಿ ಸಮಿತಿಯು ಸಲ್ಲಿಸಿದೆ. ಸಂಸದರು ಅಥವಾ ಶಾಸಕರಾಗಿ ಚುನಾವಣೆಗೆ ನಿಂತಿರುವವರ ಆಸ್ತಿಯನ್ನು ತಿಳಿದುಕೊಳ್ಳುವ ಹಕ್ಕು ಸಾರ್ವಜನಿಕರಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಹಾಗೆ ಇನ್ನು ಮುಂದೆ  ಸಾರ್ವಜನಿಕ ಹುದ್ದೆಯಲ್ಲಿ ಮತ್ತು ಸಂವಿಧಾನಿಕ ಹುದ್ದೆಯಲ್ಲಿರುವವರು ಕೂಡ ತಮ್ಮ ಆಸ್ತಿಯ ವಾರ್ಷಿಕ ರಿಟರ್ನ್ಸ್​​​ನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಹೇಳಿದೆ.

ಸರ್ಕಾರಿ ಮತ್ತು ಸಂವಿಧಾನಿಕ ಹುದ್ದೆಯಲ್ಲಿರುವವರ ಆಸ್ತಿ ವಿವರಗಳನ್ನು ಸಾರ್ವಜನಿಕರಿಗೆ ತಿಳಿಕೊಳ್ಳುವುದು ಮತ್ತು ಈ ವರದಿಯನ್ನು ಸಾರ್ವಜನಿಕ ಡೊಮೇನ್‌ಗೆ ಅಪ್‌ಲೋಡ್ ಮಾಡುವ ಅಗತ್ಯವಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *