Share this news

ಬೆಂಗಳೂರು: ವಿಧಾನಸಭೆಯಲ್ಲಿ ಅಸಭ್ಯವಾಗಿ ವರ್ತನೆ ತೋರಿದಂತ ಆರೋಪದ ಹಿನ್ನಲೆಯಲ್ಲಿ ಹತ್ತು ಮಂದಿ ಬಿಜೆಪಿ ಸದಸ್ಯರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.

ಇಂದು ವಿಧಾನಸಭೆಯಲ್ಲಿ ಸಚಿವ ಹೆಚ್ ಕೆ ಪಾಟೀಲ್ ಅವರು ಪ್ರಸ್ತಾವನೆಯನ್ನು ಮಂಡಿಸಿದರು. ಡಾ.ಸಿಎನ್ ಅಶ್ವತ್ಥನಾರಾಯಣ್, ವಿ.ಸುನೀಲ್ ಕುಮಾರ್, ಆರ್ ಅಶೋಕ್, ವೇದವ್ಯಾಸ ಕಾಮತ್, ಯಶಪಾಲ್ ಸುವರ್ಣ, ಮುನಿರಾಜ್, ಉಮರ್ ನಾಥ್ ಕೋಟ್ಯನ್,ಅರವಿಂದ್ ಬೆಲ್ಲದ್, ಅರಗ ಜ್ಞಾನೇಂದ್ರ, ವೈ ಭರತ್ ಶೆಟ್ಟಿ ಅವರನ್ನು ಸದನ ಮುಗಿಯುವವರೆಗೂ ಅಮಾನತುಗೊಳಿಸುವ ಕರ್ನಾಟಕ ವಿಧಾನಸಭೆ ಕಾರ್ಯವಿಧಾನದ ಮೇಲೆ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸುವಂತೆ ವಿಧಾನಸಭೆಯಲ್ಲಿ ಸಚಿವ ಹೆಚ್ ಕೆ ಪಾಟೀಲ್ ಅವರು ಮಂಡಿಸಿದರು.

ಈ ವೇಳೆ ಸ್ಪೀಕರ್ ಯು.ಟಿ ಖಾದರ್ ವಿಷಾಧದಿಂದ ಮತಕ್ಕೆ ಹಾಕುತ್ತಿದ್ದೇನೆ. ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಈ ಅಧಿವೇಶನದ ಮುಗಿಯುವವರೆಗೂ ಸದನದಿಂದ ಅಮಾನತುಗೊಳಿಸಿ ಆದೇಶಿಸಿದರು.

ಬಿಪಿ ಹೆಚ್ಚಾಗಿ ಕುಸಿದುಬಿದ್ದ ಶಾಸಕ ಯತ್ನಾಳ್‌:

ಸಸ್ಪೆಂಡ್ ಆದ ಯತ್ನಾಳ್​ರನ್ನ ಸದನದಿಂದ ಮಾರ್ಷಲ್ಸ್​ ಎಳೆದೊಯ್ದಿದ್ದಾರೆ. ಈ ವೇಳೆ ಮಾರ್ಷಲ್ಸ್​ ಎಳೆದಾಟದಿಂದಾಗಿ ಬಿಪಿ ಹೆಚ್ಚಾಗಿದ್ದು,  ಶಾಸಕ ಯತ್ನಾಳ್​​ ಪ್ರಜ್ಞೆ ತಪ್ಪಿ ಬಿದಿದ್ದಾರೆ. ಕೂಡಲೇ ಅವರನ್ನು ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

Leave a Reply

Your email address will not be published. Required fields are marked *