ಬೆಂಗಳೂರು: ಹೆದ್ದಾರಿ ಗಸ್ತು ಕರ್ತವ್ಯಕ್ಕಾಗಿ ಕಳೆದ ಸರ್ಕಾರ ಒಟ್ಟು 250 ಮಾರುತಿ ಡಎರ್ಟಿಗಾ ಕಾರುಗಳನ್ನು ನಿಯೋಜಿಸಲಾಗಿದ್ದು, ಈ ವಾಹನಗಳನ್ನು ಅನ್ಯ ಕರ್ತವ್ಯಕ್ಕಾಗಿ ನಿಯೋಜಿಸುತ್ತಿರುವ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಹೆದ್ದಾರಿ ಗಸ್ತು ಕರ್ತವ್ಯಕ್ಕಾಗಿ ಮಾತ್ರ ನಿಯೋಜಿಸುವಂತೆ ಸಂಚಾರಿ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಹೆದ್ದಾರಿ ಗಸ್ತು ವಾಹನಗಳನ್ನು ಹೆದ್ದಾರಿ ಗತ್ತು ಕರ್ತವ್ಯಕ್ಕೆ ನಿಯೋಜಿಸುವ ಬದಲು ಸಚಿವರ ಹಾಗೂ ಗಣ್ಯ ವ್ಯಕ್ತಿಗಳಿಗೆ ಎಸ್ಕಾರ್ಟ್ ಹಾಗೂ ಪೈಲೆಟ್ ವಾಹನಗಳಾಗಿ ಬಳಕೆ,ಸಂಚಾರಿ ನಿರ್ವಹಣೆ ಕರ್ತವ್ಯ, ಎಸ್‌ಪಿಗಳ ಮನೆಯ ಭದ್ರತೆಗೆ, ಗಣ್ಯ ವ್ಯಕ್ತಿಗಳ ಭದ್ರತೆಗೆ ಸೇರಿದಂತೆ ಇತರೇ ಕರ್ತವ್ಯಕ್ಕಾಗಿ ಈ ವಾಹನಗಳನ್ನು ನಿಯೋಜಿಸಿರುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಈ ವಾಹನಗಳನ್ನು ಹೆದ್ದಾರಿ ಗಸ್ತು ಕರ್ತವ್ಯ ಮಾತ್ರ ನಿಯೋಜಿಸುವಂತೆ ಎಡಿಜಿಪಿ ಖಡಕ್ ಆದೇಶ ಹೊರಡಿಸಿದ್ದಾರೆ.