ಹೆಬ್ರಿ: ಹೆಬ್ರಿ ತಾಲೂಕಿನ ಕೊಡಚೆಬೆಟ್ಟು ಎಂಬಲ್ಲಿ ಕರುಣಾಕರ ಹೆಗ್ಡೆ ಎಂಬವರ ತೋಟದಲ್ಲಿ ಮೂಡಬಿದಿರೆ ನೆಲ್ಲಿಕಾರು ನಿವಾಸಿ ಪೂರ್ಣೇಶ (34ವ) ಎಂಬವರು ಕೆಲಸ ಮಾಡಿಕೊಂಡಿದ್ದು ಅಲ್ಲಿಯೇ ವಾಸ್ತವ್ಯವಿದ್ದರು.
ಕರುಣಾಕರ ಅವರ ಮನೆಗೆ ದೀಪವನ್ನು ಇಡಲು ರಮೇಶ ಎಂಬುವರನ್ನು ನೇಮಿಸಲಾಗಿದ್ದು ಆಗಸ್ಟ್ .7ರಂದು ಪೂರ್ಣೇಶ್ ರವರು ತನ್ನ ಮಾವ ಚಂದ್ರ ಅವರೊಂದಿಗೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ರಮೇಶ ರವರು ಕರುಣಾಕರರವರ ಮನೆಯಲ್ಲಿ ದೀಪವನ್ನು ಇಟ್ಟು ಸ್ನೇಹಿತ ಸಂತೋಷ್ ಜೊತೆಗೆ ತೋಟಕ್ಕೆ ಬಂದು ಬಾಳೆಕಾಯಿಯನ್ನು ಕಿತ್ತು ಬಾಳೆ ಗಿಡವನ್ನು ಕಡಿಯುತ್ತಿದ್ದ ವೇಳೆ ಅಲ್ಲಿಯೇ ಕೆಲಸ ಮಾಡುತ್ತಿದ್ದ ಪೂರ್ಣೇಶ್ ಮತ್ತು ಚಂದ್ರರವರು ರಮೇಶ್ ಬಳಿ ತೋಟವನ್ನು ಯಾಕೆ ಹಾಳು ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದಕ್ಕೆ ರಮೇಶ್ ಚಂದ್ರ ಅವರಿಗೆ ಹಲ್ಲೆ ನಡೆಸಿ ತನ್ನ ಬಳಿ ಇರುವ ಕತ್ತಿಯಿಂದ ಪೂರ್ಣೇಶ್ ಗೆ ಹಲ್ಲೆ ನಡೆಸಿದ್ದಾರೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.