ಹೆಬ್ರಿ :ಹೆಬ್ರಿ ತಾಲೂಕಿನ ಬೆಳಂಜೆ ಗ್ರಾಮದ ಭೂತಗುಂಡಿ ಎಂಬಲ್ಲಿಂದ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ. ಭೂತಗುಂಡಿ ವಸಂತ ಶೆಟ್ಟಿ ಎಂಬವರ ಪುತ್ರ ವಿಜೇಶ (42 ವರ್ಷ) ನಾಪತ್ತೆಯಾದವರು.
ಅವರು ಕಳೆದ 16 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು ಉಡುಪಿ ಬಾಳಿಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಿಜೇಶ ಅವರು ಈ ಹಿಂದೆ ಎರಡು ಮೂರು ಬಾರಿ ಮನೆ ಬಿಟ್ಟು ಹೋಗಿದ್ದು 8 – 10 ದಿನದ ಬಳಿಕ ಮನೆಗೆ ವಾಪಸಾಗುತ್ತಿದ್ದರು. ಆದರೆ ಈ ಬಾರಿ ಜೂನ್. 30ರಂದು ಮನೆಯಿಂದ ಹೊರ ಹೋದ ವಿಜೇಶ ಅವರು ಈವರೆಗೂ ಮನೆಗೆ ಬಾರದೆ ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾಗಿದ್ದಾರೆ.
ಈ ಕುರಿತು ಹೆಬ್ರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ