ಬೆಂಗಳೂರು: ಈ ಹಿಂದಿನ ಸಾಲಿನಲ್ಲಿ ರಾಜ್ಯವ್ಯಾಪಿ ರಾಸುಗಳಲ್ಲಿ ಕಾಣಿಸಿಕೊಂಡಿದ್ದ ಚರ್ಮಗಂಟು ರೋಗದಿಂದ ಕಂಗಾಲಾಗಿದ್ದ ಹೈನುಗಾರರಿಗೆ ಇದೀಗ ಮತ್ತೊಂದು ಭಯಾನಕ ಖಾಯಿಲೆ ಬರಸಿಡಿಲಿನಂತೆ ಬಂದರೆಗಿದ್ದು, ಒಟೈಟಿಸ್ ಎನ್ನುವ ಖಾಯಿಲೆ ರಾಜ್ಯಕ್ಕೆ ಕಾಲಿಟ್ಟಿದ್ದು ಹೈನುಗಾರರಲ್ಲಿ ಆಂತಕ ಮನೆ ಮಾಡಿದೆ.
ತಮಿಳುನಾಡು ರಾಜ್ಯದ ಹಲವು ಭಾಗದಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿದ್ದ ಒಟೈಟಿಸ್ ಎಂಬ ಮಾರಕ ಕಾಯಿಲೆ ರಾಜ್ಯದ ಗಡಿಯ ಮೂಲಕ ರಾಜ್ಯಕ್ಕೂ ಕಾಲಿಟ್ಟಿದೆ.ಈ ಮಾರಕ ಕಾಯಿಲೆ ಕಾಣಿಸಿಕೊಂಡ ಹಸುಗಳು ಸಾವಿಗೀಡಾಗುವ ಸಾಧ್ಯತೆಯೇ ಹೆಚ್ಚು,ಯಾಕೆಂದರೆ ಈ ಖಾಯಿಲೆಗೆ ನಿರ್ದಿಷ್ಟ ಚಿಕಿತ್ಸೆ ಇನ್ನೂ ಇಲ್ಲದ ಕಾರಣದಿಂದ ಅಪರೂಪದ ಪ್ರಕರಣದಲ್ಲಿ ಮಾತ್ರ ಹಸು ಬದುಕುಳಿಯುವ ಸಾಧ್ಯತೆಯಿದ್ದು, ರೈತರು ಬಹಳ ಎಚ್ಚರಿಕೆ ಇರಬೇಕಿದೆ.
ಬೆಂಗಳೂರು ಸಮೀಪದ ಆನೆಕಲ್ ಸುತ್ತಮುತ್ತಲಿನ ಭಾಗದಲ್ಲಿನ ಹೈನುಗಾರರಿಗೆ ಈ ಒಟೈಟಿಸ್ ಖಾಯಿಲೆ ತಲೆನೋವಾಗಿ ಪರಿಣಮಿಸಿದೆ. ಆನೇಕಲ್ ತಾಲೂಕಿನ ಬಹುತೇಕ ಹಳ್ಳಿಗಳಿಗೆ ಈ ಕಾಯಿಲೆ ಹಬ್ಬಿದ್ದು, ,ವಣಕನಹಳ್ಳಿ,ಇಂಡ್ಲವಾಡಿ,ಸುರಗಜಕ್ಕನಹಳ್ಳಿ,ದಿನ್ನೂರು ಸೇರಿದಂತೆ ಹಲವೆಡೆ ರಾಸುಗಳು ಸಾವಿಗೀಡಾದ ಪ್ರಕರಣಗಳು ವರದಿಯಾಗಿವೆ
ಒಟೈಟಿಸ್ ರೋಗದ ಆರಂಭದಲ್ಲಿ ಹಸುವಿನ ಕಿವಿ ಸೋರಲು ಶುರುವಾಗುತ್ತದೆ ಬಳಿಕ ಹಸುವಿಗೆ ತಲೆನೋವು ಕಾಣಿಸಿಕೊಂಡು ಸೊರಗುತ್ತದೆ. ಇದಾದ ಮೇಲೆ ಮೂಗು, ಬಾಯಿ, ಕಿವಿ ಕೂಡ ಸೋರಲು ಪ್ರಾರಂಭ ಆಗುತ್ತದೆ.ಈ ಕಾಯಿಲೆಗೆ ನಿರ್ದಿಷ್ಟ ಔಷದ ಇಲ್ಲದೇ ಹೈನುಗಾರರು ಕಂಗಾಲಾಗಿದ್ದು ಈ ಖಾಯಿಲೆ ನಿಯಂತ್ರಣಕ್ಕೆ ಔಷಧಿ ಕಂಡುಹಿಡಿಯುವ ಪ್ರಯತ್ನ ಮುಂದುವರಿದಿದೆ
ಈ ಕಾಯಿಲೆ ಕಾಣಿಕೊಂಡಾಗ ಹಸುವನ್ನು ಪ್ರತ್ಯೇಕವಾಗಿ ಕಟ್ಟಿಹಾಕಬೇಕು.ವೈದ್ಯರಿಂದ ನಿಯಮಿತವಾಗಿ ಚಿಕಿತ್ಸೆ ಕೊಡಿಸಬೇಕು ಮಾತ್ರವಲ್ಲದೇ ಹಸುವಿಗೆ ವೈದ್ಯರಿಂದ ಆಂಟಿ ಬಯೋಟೆಕ್, ಐವರ್ ಮೆಕ್ಟೀನ್ ಎಂಬ ಇಂಜೆಕ್ಷನ್ ಕೊಡಿಸಬೇಕು.ರೋಗಪೀಡಿತ ಹಸು ತಿಂದ ಆಹಾರವನ್ನು ಇತರೇ ಹಸುಗಳಿಗೆ ತಿನ್ನಿಸಬಾರದು ಇದರಿಂದ ಉಳಿದ ಹಸುಗಳಿಗೂ ಖಾಯಿಲೆ ಹರಡುವ ಸಾಧ್ಯತೆಗಳು ಹೆಚ್ಚಿರುತ್ತವೆ.