Share this news

ಬೆಂಗಳೂರು: ನಗರದ ಕಂದಲಹಳ್ಳಿಯ ರಾಮೇಶ್ವರಂ ಕಫೆಯಲ್ಲಿ ಬಾಂಬ್ ಸ್ಪೋಟಗೊಂಡ ಪ್ರಕರಣದ ಈ ಘಟನಾ ಸ್ಥಳದಲ್ಲಿ ಟೈಮರ್ ಪತ್ತೆಯಾಗಿದ್ದು, ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಗುರುವಾರ ಮಧ್ಯಾಹ್ನ ಊಟದ ಸಮಯದಲ್ಲಿ ಬೆಂಗಳೂರಿನ ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಮೇಶ್ವರಂ ಕಫೆಯಲ್ಲಿ ಏಕಾಎಕಿ ನಿಗೂಢ ಸ್ಪೋಟ ಉಂಟಾಗಿತ್ತು. ಆ ಬಳಿಕ ಅಂದು ಬಾಂಬ್ ಸ್ಪೋಟ ಎಂಬುದಾಗಿ ತಿಳಿದು ಬಂದಿತ್ತು.
ಘಟನಾ ಸ್ಥಳಕ್ಕೆ ಎನ್‌ಐಎ ಅಧಿಕಾರಿಗಳು, ಪೊಲೀಸರು, ಶ್ವಾನದಳ, ಎಫ್‌ಎಸ್‌ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪರಿಶೀಲನೆ ವೇಳೆ ಸ್ಥಳದಲ್ಲಿ ಟೈಮರ್ ಪತ್ತೆಯಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ

             

Leave a Reply

Your email address will not be published. Required fields are marked *