ಕಾರ್ಕಳ: ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲೆಗೆ ದಕ್ಷ ಪ್ರಾಮಾಣಿಕ ಪೊಲೀಸ್ ವರಿಷ್ಠಾಧಿಕಾರಿಗಳನ್ನು ನಿಯೋಜಿಸಿದ ಸರ್ಕಾರದ ಕ್ರಮ ಶ್ಲಾಘನೀಯ ಎಂದುಕಾರ್ಕಳ ತಾಲೂಕು ನಾಗರಿಕ ಜನಜಾಗೃತಿ ಸಮಿತಿ ಅಧ್ಯಕ್ಷ ಉಮೇಶ್ ಕಲ್ಲೊಟ್ಟೆ ಹೇಳಿದ್ದಾರೆ.
ಜಿಲ್ಲೆಯಲ್ಲಿ ನಿರಂತರ ಅಕ್ರಮ ಚಟುವಟಿಕೆಯಿಂದ ನಲುಗುತ್ತಿರುವ ಉಡುಪಿ ಜಿಲ್ಲೆಗೆ ಖಡಕ್ ಪೊಲೀಸ್ ಅಧಿಕಾರಿಯ ಕಾರ್ಯದಕ್ಷತೆಯಿಂದ ಜನತೆ ನಿಟ್ಟಿಸಿರು ಬಿಡುವಂತಾಗಿದೆ. ಮಟ್ಕಾ, ಜುಗಾರಿ, ಇಸ್ಪೀಟ್, ಕೋಳಿಅಂಕ,ಮರಳು ಮಾಫಿಯಾಗೆ ಕಡಿವಾಣ ಹಾಕಲಾಗಿದ್ದು ಇದರಿಂದ ಜನತೆಯ ನೆಮ್ಮದಿಯಿಂದ ಬದುಕುತಿದ್ದಾರೆ.
ಭಾರೀ ಸರಕು ತುಂಬಿದ ಘನ ವಾಹನಗಳು ಓಡಾಡುವುದರಿಂದ ಲಘುವಾಹನ ಸವಾರರು ರಸ್ತೆಯಲ್ಲಿ ಈಗ ನೆಮ್ಮದಿಯಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಅತ್ಯಂತ ಸಂತೋಷವಾಗಿದೆ. ಈಗ ಅಕ್ರಮವಾಗಿ ವ್ಯಾಪಾರ ನಡೆಸಲು ಅನುಮತಿ ನೀಡಿ ಎಂದು ಕೂಗಾಡುವ ಸಂಘಟನೆಗಳ ಹೋರಾಟಕ್ಕೆ ಯಾರು ಬೆಂಬಲ ನೀಡಬಾರದು ಎಲ್ಲರು ಕಾನೂನಾತ್ಮಕವಾಗಿ ವ್ಯವಹಾರ ನಡೆಸಲು ಮುಂದಾಗಬೇಕು ಜಿಲ್ಲೆಯ ಶಾಂತಿ ಸೌಹಾರ್ದತೆ ಹೆಚ್ಚಾಗಿದ್ದು ಎಲ್ಲರೂ ನೆಮ್ಮದಿಯಲ್ಲಿದ್ದಾರೆ.
ಒಂದು ವೇಳೆ ಅಕ್ರಮ ದಂಗೆಕೋರರ ಒತ್ತಡಕ್ಕೆ ಮಣಿದು ಸರ್ಕಾರ ಎಸ್ಪಿ ಅವರ ವರ್ಗಾವಣೆಗೆ ಮುಂದಾದರೆ ಜಿಲ್ಲಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಉಮೇಶ್ ಕಲ್ಲೊಟ್ಟೆ ಎಚ್ಚರಿಸಿದ್ದಾರೆ
