Category: ಉಡುಪಿ

ಸ್ವಂತ ಮನೆಯಿಲ್ಲದ ಮಾಳ ಗ್ರಾಮದ ಬಡ ಮಹಿಳೆಗೆ  ಸೂರು ಭಾಗ್ಯ ಕಲ್ಪಿಸಿದ ದ.ಕ‌ ಜಿಲ್ಲಾ ಹೆಗ್ಗಡೆ ಸಮಾಜ

ಕಾರ್ಕಳ: ವಾಸಕ್ಕೆ ಸ್ವಂತ ಸೂರಿಲ್ಲದೇ ಅತಂತ್ರ ಸ್ಥಿತಿಯಲ್ಲಿದ್ದ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಕೂಡುಬೆಟ್ಟು ಸರಸ್ವತಿ ಹೆಗ್ಡೆ ಅವರಿಗೆ ಕೋಟೆಬಾಗಿಲು ವೀರಮಾರುತಿ ದೇವಸ್ಥಾನ ಹಾಗೂ ದ..ಕ ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ನೆರವಿನಿಂದ ನಿರ್ಮಾಣಗೊಂಡ ನೂತನ ಮನೆಯನ್ನು ಗುರುವಾರ ಹಸ್ತಾಂತರಿಸಲಾಯಿತು. ತೀರಾ…

ಭಾರೀ ಮಳೆ ಹಿನ್ನೆಲೆಯಲ್ಲಿ ನಾಳೆಯೂ (ಜೂ.13) ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ,ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಣೆ

ಉಡುಪಿ: ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆಯೂ (ಜೂ.13) ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಆದೇಶಿಸಿದ್ದಾರೆ. ಮುಂದಿನ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ…

ವಿದ್ಯಾರ್ಥಿನಿ ಜೊತೆ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷನಿಂದ ಅಸಭ್ಯ ವರ್ತನೆ ಆರೋಪ: ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಕಾಂಗ್ರೆಸ್ ಒತ್ತಾಯ

ಕಾರ್ಕಳ: ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ಮಾತನಾಡಿದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು ಇದೊಂದು ಅಘಾತಕಾರಿ ಬೆಳವಣಿಗೆಯಾಗಿದೆ, ಪೋಲಿಸ್ ಇಲಾಖೆ ತಕ್ಷಣ ಈತನ ಮೇಲೆ ಸುಮೋಟೋ ಕೇಸು ದಾಖಲಿಸಿ ತನಿಖೆ ನಡೆಸಬೇಕೆಂದು ಕಾರ್ಕಳ ಯುವ ಕಾಂಗ್ರೆಸ್…

ಉಡುಪಿ ಸೇರಿದಂತೆ 10 ಜಿಲ್ಲೆಗಳಿಗೆ ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕ

ಬೆಂಗಳೂರು: ಉಡುಪಿ ಸೇರಿದಂತೆ ಬಾಕಿ ಇರುವ 10 ಜಿಲ್ಲಾ ಘಟಕಗಳಿಗೆ ಬಿಜೆಪಿ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಜಿಲ್ಲಾಧ್ಯಕ್ಷರನ್ನು ನೇಮಿಸಿ ರಾಜ್ಯ ಬಿಜೆಪಿ ಚುನಾವಣಾಧಿಕಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಜೂನ್ 11 ರಂದು ಆದೇಶ ಹೊರಡಿಸಿದ್ದಾರೆ. ಪಕ್ಷದ ಸಂಘಟನೆಯನ್ನು ಸಧೃಡಗೊಳಿಸುತ್ತಾ, ಮುಂಬರುವ…

ಭಾರೀ ಮಳೆ ಹಿನ್ನೆಲೆ ನಾಳೆ(ಜೂ.12) ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ,ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ

ಉಡುಪಿ: ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆ (ಜೂ.12) ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಆದೇಶಿಸಿದ್ದಾರೆ. ಮುಂದಿನ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ…

ಹೆಬ್ರಿ: ಕಂಪನಿಯ ನಿವೃತ್ತ ನೌಕರನಿಗೆ ಹಣದ ಆಸೆ ತೋರಿಸಿ ಲಕ್ಷಾಂತರ ರೂ ಪಂಗನಾಮ: ದುಪ್ಪಟ್ಟು ಹಣದಾಸೆಗೆ ಬಲಿಯಾಗಿ ಬರೋಬ್ಬರಿ 31 ಲಕ್ಷಕ್ಕೂ ಮಿಕ್ಕಿ ಹಣ ಕಳೆದುಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ ವ್ಯಕ್ತಿ

ಹೆಬ್ರಿ: ಬೆಂಗಳೂರಿನ‌ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿ ನಿವೃತ್ತಿಯಾಗಿದ್ದ ಹೆಬ್ರಿ ತಾಲೂಕಿನ ಶಿವಪುರ ಗ್ರಾಮದ ವಾಸುದೇವ ಪುತ್ತಿ ಎಂಬವರು ದುಪ್ಪಟ್ಟು ಹಣದ ಆಸೆಗೆ ಬಲಿಯಾಗಿ ನಕಲಿ ಕಂಪನಿಯಲ್ಲಿ ಹೂಡಿಕೆ ಮಾಡಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡು ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ವಾಸುದೇವ ಪುತ್ತಿಯವರು…

ಚುನಾವಣಾ ಪ್ರಚಾರದಲ್ಲಿ ರಾಮ ಬೇಕೋ, ಅಲ್ಲಾಹ್ ಬೇಕೋ ವಿವಾದಾತ್ಮಕ ಭಾಷಣ : ಸುನೀಲ್ ಕುಮಾರ್ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ತಡೆ

ಬೆಂಗಳೂರು :ಕಳೆದ 2018 ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಂಟ್ವಾಳದಲ್ಲಿ ಮಾಡಿದ್ದ ವಿವಾದಾತ್ಮಕ ಭಾಷಣದ ಕುರಿತು ಮಾಜಿ ಸಚಿವ ವಿ.ಸುನೀಲ್ ಕುಮಾರ್ ವಿರುದ್ಧ ಬಿಸಿ ರೋಡ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಕುರಿತ ಪೊಲೀಸರ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಬಿಸಿ ರೋಡ್…

ರಾಜ್ಯದ ತೆರಿಗೆದಾರರ ಹಣಪೋಲು  ಮಾಡಿ 150 ಕೋ.ರೂ ವೆಚ್ಚದಲ್ಲಿ ಸಿದ್ದಪಡಿಸಿದ ಜಾತಿಗಣತಿ ವರದಿಯನ್ನು ಕಾಂಗ್ರೆಸ್ ಹೈಕಮಾಂಡ್ ಕಸದ ಬುಟ್ಟಿಗೆ ಎಸೆದಿದೆ:  ಸರ್ಕಾರದ ವಿರುದ್ಧ ಮಾಜಿ ಸಚಿವ ಸುನಿಲ್ ಕುಮಾರ್ ಆಕ್ರೋಶ

ಬೆಂಗಳೂರು:ರಾಜ್ಯ ಕಾಂಗ್ರೆಸ್ ಸರ್ಕಾರ ಸಿದ್ದಪಡಿಸಿರುವ ಜಾತಿ ಗಣತಿ ವರದಿಯನ್ನು ಕಾಂಗ್ರೆಸ್ ಹೈಕಮಾಂಡ್ ಕಸದ ಬುಟ್ಟಿಗೆ ಎಸೆದಿದೆ. 150 ಕೋಟಿ ರೂ.ವೆಚ್ಚದ ಈ ವರದಿಗೆ ರಾಜ್ಯದ ತೆರಿಗೆದಾರರಿಗೆ ಹಣ ಬಳಸಿದ್ದು ಇದು ತೆರಿಗೆ ಪಾವತಿದಾರರಿಗೆ ಹಾಗೂ ಹಿಂದುಳಿದ ಮತ್ತು ಶೋಷಿತ ಸಮುದಾಯಕ್ಕೆ ಮಾಡಿದ…

ಬೆಂಗಳೂರು ಕಾಲ್ತುಳಿತದಿಂದ ಮೃತಪಟ್ಟ ಹೆಬ್ರಿಯ ಚಿನ್ಮಯಿ ಶೆಟ್ಟಿ ಕುಟುಂಬಕ್ಕೆ 25 ಲಕ್ಷ ಮೊತ್ತದ ಪರಿಹಾರದ ಚೆಕ್ ವಿತರಿಸಿದ ಜಿಲ್ಲಾಧಿಕಾರಿ

ಹೆಬ್ರಿ: ಆರ್‌ಸಿಬಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತೆರಳಿದ್ದ ಉಡುಪಿ ಜಿಲ್ಲೆಯ ಹೆಬ್ರಿ ಮೂಲದ ಚಿನ್ಮಯಿ ಶೆಟ್ಟಿಯವರು ಭೀಕರ ಕಾಲ್ತುಳಿತದಿಂದ ಮೃತಪಟ್ಟಿದ್ದರು. ಈ ದುರಂತದಿAದ ಮೃತಪಟ್ಟ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ 25 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿತ್ತು. ಈ…

ವಿಚಾರಣೆಯ ನೆಪದಲ್ಲಿ ಹಿಂದೂ ಕಾರ್ಯಕರ್ತರಿಗೆ ಕಿರುಕುಳ: ಕ್ರಮ ವಹಿಸುವಂತೆ ಹಿಂದೂ ಸಂಘಟನೆಗಳ ಒಕ್ಕೂಟದಿಂದ ಮನವಿ

ಉಡುಪಿ : ಕಳೆದ ಒಂದು ವಾರದಿಂದ ಪೊಲೀಸರು ಕೋಮುಸೌಹಾರ್ದವನ್ನು ಕಾಪಾಡುವ ನೆಪದಲ್ಲಿ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿ ಕಿರುಕುಳ ನೀಡುತ್ತಿದ್ದು, ಇದಕ್ಕೆ ಸೂಕ್ತ ಕ್ರಮ ವಹಿಸುವಂತೆ ಆಗ್ರಹಿಸಿ ಸಮಸ್ತ ಹಿಂದೂ ಸಂಘಟನೆಗಳ ಒಕ್ಕೂಟದ ವತಿಯಿಂದ ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ದಕ್ಷಿಣ ಕನ್ನಡ…