Category: ಉಡುಪಿ

ಮಣಿಪಾಲ: ಗಾಂಜಾ ಮಾರಾಟಕ್ಕೆ ಯತ್ನ; 5.75 ಲಕ್ಷ ಮೌಲ್ಯದ ಗಾಂಜಾ ಸಹಿತ ಓರ್ವ ಪೊಲೀಸ್ ವಶಕ್ಕೆ: ಆರೋಪಿ ಭಟ್ಕಳದ ಆರೀಬ್‌ ಅಹಮ್ಮದ್‌ ಬಂಧನ: ವಿಜಯವಾಡದಿಂದ ತಂದಿದ್ದ ಗಾಂಜಾವನ್ನು ಮಾರಾಟ ಮಾಡಲು ಯತ್ನ

ಉಡುಪಿ: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯೋರ್ವನನ್ನು ಉಡುಪಿ ಸೆನ್ ಪೊಲೀಸರು ಬಂಧಿಸಿದ್ದಾರೆ. ಉಡುಪಿ 80ಬಡಗಬೆಟ್ಟು ಗ್ರಾಮದ ಟ್ಯಾಪ್ಮಿ ರಸ್ತೆಯ ತಾಂಗೋಡೆ 2ನೇ ಕ್ರಾಸ್ ಬಳಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಭಟ್ಕಳ ಗುಲ್ಜಾರ್‌ ಸ್ಟ್ರೀಟ್‌ ನಿವಾಸಿ ಆರೀಬ್‌…

ಉಡುಪಿ: ಕಾರು ಅಪಘಾತ; ಪ್ರಯಾಣಿಕರು ಅಪಾಯದಿಂದ ಪಾರು

ಉಡುಪಿ: ಪರ್ಕಳದ ಈಶ್ವರ ನಗರ ಪಂಪ್ ಹೌಸ್ ಬಳಿಯ ಅವೈಜ್ಞಾನಿಕ ತಿರುವಿನಿಂದಾಗಿ ಕಾರು ನುಗ್ಗಿ ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ನಡೆದಿದೆ. ತಮಿಳುನಾಡು ಮೂಲದ ಯಾತ್ರಿಕರು ಉಡುಪಿಯಿಂದ ಶೃಂಗೇರಿಗೆ ಹೊರಟಿದ್ದರು ಎಂದು ತಿಳಿದು ಬಂದಿದೆ. ಈ ಭಾಗದಲ್ಲಿ ಈಗಾಗಲೇ 10ಕ್ಕೂ ಅಧಿಕ…

ಕಾರ್ಕಳ ತಾಲೂಕಿನಲ್ಲಿ ಎಗ್ಗಿಲ್ಲದೇ ನಡೆಯುತ್ತಿದ್ದ  ಅಕ್ರಮ ಗಣಿಗಾರಿಕೆ ಮಟ್ಟ ಹಾಕಲು ಕಾರ್ಕಳ ಎಎಸ್‌ಪಿ ಡಾ.ಹರ್ಷಾ ಪ್ರಿಯಂವದಾ ದಿಟ್ಟ ನಿಧಾರ: ನಾಲ್ಕು ಅಕ್ರಮ ಕಲ್ಲು ಕೋರೆಗಳಿಗೆ ಪೊಲೀಸರಿಂದ ಏಕಕಾಲದಲ್ಲಿ ದಾಳಿ: ಕಲ್ಲು ಸಾಗಾಟ ಲಾರಿ,ಕ್ರೇನ್ ಸೀಜ್: ಮಾಲಕರು ಹಾಗೂ ಕಾರ್ಮಿಕರು ವಶಕ್ಕೆ

ಸಾಂದರ್ಭಿಕ ಚಿತ್ರ ಕಾರ್ಕಳ: ಕಾರ್ಕಳ ತಾಲೂಕಿನ ಕುಕ್ಕುಂದೂರು ಅಯ್ಯಪ್ಪನಗರ, ನಕ್ರೆ ವರ್ಣಬೆಟ್ಟು, ಜಾರ್ಕಳ ಹಾಗೂ ಎರ್ಲಪಾಡಿ ಎಂಬಲ್ಲಿ ಪರವಾನಿಗೆಯಲ್ಲದೇ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದವರ ವಿರುದ್ಧ ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ.ಹರ್ಷ ಪ್ರಿಯಂವದಾ ಮಾರ್ಗದರ್ಶನದ ಮೇರೆಗೆ ಏಕಕಾಲದಲ್ಲಿ ದಾಳಿ ನಡೆಸಿದ…

ಕ್ರಿಯೇಟಿವ್ ಸಂಸ್ಥೆಯ ಉಚಿತ ಶಿಕ್ಷಣದ “ಹೊಂಗಿರಣ” ಯೋಜನೆಗೆ ಅರ್ಜಿ ಆಹ್ವಾನ

ಕಾರ್ಕಳ: ದ್ವಿತೀಯ ಪಿಯುಸಿ ಹಾಗೂ ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುನ್ನತ ಫಲಿತಾಂಶಗಳ ಮೂಲಕ ರಾಜ್ಯದ ಗಮನ ಸೆಳೆದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಸಮಾಜದ ಎಲ್ಲಾ ಸ್ತರದ ವಿದ್ಯಾರ್ಥಿಗಳಿಗೂ ಉನ್ನತ ವ್ಯವಸ್ಥೆಯಡಿಯಲ್ಲಿ ಹೈಟೆಕ್ ಸೌಲಭ್ಯದೊಂದಿಗೆ ಪಿ. ಯು. ಶಿಕ್ಷಣ ಹಾಗೂ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ…

ಮಂಗಳೂರು ಪುತ್ತೂರು ಪ್ಯಾಸೆಂಜರ್ ರೈಲು ಕುಕ್ಕೆ ಸುಬ್ರಹ್ಮಣ್ಯಕ್ಕೆ ವಿಸ್ತರಣೆ: ಸಚಿವ ವಿ.ಸೋಮಣ್ಣ ಚಾಲನೆ

ಮಂಗಳೂರು: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಪುತ್ತೂರಿನ ವರೆಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲನ್ನು ಕರ್ನಾಟಕದ ಪ್ರಸಿದ್ಧ ತೀರ್ಥಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ವರೆಗೆ ವಿಸ್ತರಿಸಲಾಗಿದೆ. ಪರಿಷ್ಕೃತ ಮಾರ್ಗದೊಂದಿಗೆ ಸಂಚರಿಸಲಿರುವ ರೈಲಿಗೆ ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಮಂಗಳೂರು ಸೆಂಟ್ರಲ್…

ಉಡುಪಿ : ಕಟ್ಟಡದಿಂದ ಆಯತಪ್ಪಿ ಬಿದ್ದು ವ್ಯಕ್ತಿ ಗಂಭೀರ

ಉಡುಪಿ : ನಗರದ ಕಲ್ಸಂಕದಿAದ ಶ್ರೀಕೃಷ್ಣ ಮಠದ ಯಾತ್ರಿಕರ ವಾಹನ ನಿಲುಗಡೆ ಸ್ಥಳವನ್ನು ಸಂಪರ್ಕಿಸುವ ರಸ್ತೆ ಸನಿಹದಲ್ಲಿರುವ, ಪಾಳುಬಿದ್ದಿರುವ ಬಹುಮಹಡಿ ಕಟ್ಟಡದಿಂದ ವ್ಯಕ್ತಿಯೊಬ್ಬರು ಸುಮಾರು 25 ಅಡಿ ಎತ್ತರದಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ವ್ಯಕ್ತಿಯನ್ನು ಸೂರತ್ ಸಿಂಗ್ ರಾವತ್…

ಉಡುಪಿ ಜಿಲ್ಲೆಯ ಕಾರ್ಕಳದ ಸಾಣೂರಿನಲ್ಲಿ ಏ.13ರಂದು ರಾಜೇಶ್ವರಿ ನ್ಯಾಷನಲ್ ಸ್ಕೂಲ್ ಹಾಗೂ ಪಿಯು ಕಾಲೇಜು ಲೋಕಾರ್ಪಣೆ : ವಿದ್ಯಾರ್ಥಿಗಳ ಜ್ಞಾನದ ಹಸಿವು ನೀಗಿಸಲು ಸಿದ್ಧವಾಗಿದೆ ವಿದ್ಯಾ ದೇಗುಲ

ಕಾರ್ಕಳ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣವು ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಹಿರಿಯರ ನಾಣ್ನುಡಿಯಂತೆ ಮಕ್ಕಳಿಗಾಗಿ ಆಸ್ತಿ ಮಾಡಬೇಡಿ ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ಗುಣಮಟ್ಟದ ಶಿಕ್ಷಣ ನೀಡಿ ಅವರನ್ನು ಆಸ್ತಿಯನ್ನಾಗಿಸಿ ಎನ್ನುವ ಮಾತು ಇಂದು ಅಕ್ಷರಶಃ ನಿಜವಾಗಿದೆ. ಮಕ್ಕಳು ಚೆನ್ನಾಗಿ…

ಕೋಟ: ಬೈಕ್ ಡಿಕ್ಕಿಯಾಗಿ ಪಾದಾಚಾರಿ ಮೃತ್ಯು: ಸವಾರ, ಸಹಸವಾರನಿಗೆ ಗಾಯ

ಕೋಟ: ಬೈಕ್ ಡಿಕ್ಕಿ ಹೊಡೆದು ಪಾದಚಾರಿಯೋರ್ವರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೋಟ ಪೆಟ್ರೋಲ್ ಬಂಕ್ ಸಮೀಪದ ಬೊಬ್ಬರ್ಯ ಕಟ್ಟೆ ಬಳಿ ಗುರುವಾರ ರಾತ್ರಿ ನಡೆದಿದೆ. ಮೃತಪಟ್ಟ ವ್ಯಕ್ತಿ ಕೋಟ ಕಾರ್ತಟ್ಟು ಚಂದ್ರಶೇಖರ ಶೆಟ್ಟಿ(62) ಎಂದು ಗುರುತಿಸಲಾಗಿದೆ. ಸಾಲಿಗ್ರಾಮದಿಂದ ತೆಕ್ಕಟ್ಟೆ…

ಉಡುಪಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಲಕ್ಷಾಂತರ ಮೌಲ್ಯದ ವಜ್ರಾಭರಣಗಳು ಕಳವು

ಉಡುಪಿ : ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ವಜ್ರಾಭರಣಗಳು ಕಳವಾದ ಘಟನೆ ಮತ್ಸ್ಯಗಂಧ ರೈಲಿನಲ್ಲಿ ನಡೆದಿದೆ. ಮಹಾರಾಷ್ಟ್ರದ ವಿಜಯ ಎಚ್. ರಾವ್ ಅವರು ಮತ್ಸ್ಯಗಂಧ ರೈಲಿನಲ್ಲಿ ಮುಂಬಯಿಯಿಂದ ಉಡುಪಿಯತ್ತ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರು ತಮ್ಮ ಸೂಟ್‌ಕೇಸ್ ಮತ್ತು ಹ್ಯಾಂಡ್ ಬ್ಯಾಗ್‌ಗಳನ್ನು ಸೀಟ್‌ನ…

ಉಡುಪಿ : ಶ್ರೀ ಕೃಷ್ಣ ಮಠದ ರಥಬೀದಿಯಲ್ಲಿ ವೆಡ್ಡಿಂಗ್ ಶೂಟ್ ನಿಷೇಧ

ಉಡುಪಿ : ಇಲ್ಲಿನ ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ಪ್ರಿ-ವೆಡ್ಡಿಂಗ್ ಮತ್ತು ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ನಿಷೇಧಿಸಿ ಪರ್ಯಾಯ ಪುತ್ತಿಗೆ ಮಠ ಸೂಚನೆ ಹೊರಡಿಸಿದೆ. ಕೃಷ್ಣಮಠ ರಥಬೀದಿ ಪಾರಂಪರಿಕ ಕಟ್ಟಡವಿರುವ ಸ್ಥಳ. ಪ್ರಿ-ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ಹೆಸರಿನಲ್ಲಿ ಬೆಳ್ಳಂಬೆಳಗ್ಗೆ ಮಠದ ಆವರಣದಲ್ಲಿ…