ಹೆಬ್ರಿ: ಹೆಬ್ರಿ ಕೆಳಪೇಟೆಯಿಂದ ಬಂಟರ ಭವನದವರೆಗೆಗಿನ ಚತುಷ್ಪಥ ರಸ್ತೆ ಕಾಮಗಾರಿ ಕೂಡಲೇ ಆರಂಭಿಸುವಂತೆ ಜೆಡಿಎಸ್ ಪಕ್ಷದ ವತಿಯಿಂದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರಿಗೆ ಮನವಿ ಸಲ್ಲಿಸಲಾಯಿತು.
ಹೆಬ್ರಿ ರಾಷ್ಟ್ರೀಯ ಹೆದ್ದಾರಿ ರಸ್ತೆ 169ಎ ಕಾಮಗಾರಿ ನಡೆಯುತ್ತಿದ್ದು, ಹೆಬ್ರಿಯಿಂದ ಆಗುಂಬೆ ರಸ್ತೆಗೆ ಅರಣ್ಯ ಇಲಾಖೆಯವರ ನಿರ್ಧಾರ ವಿಳಂಬವಾಗುವ ಹಿನ್ನೆಲೆಯಲ್ಲಿ ಹೆಬ್ರಿ ಸರ್ಕಲ್ ನಲ್ಲಿ ದಿನನಿತ್ಯ ವಾಹನ ಚಾಲಕರಿಗೆ, ಪಾದಚಾರಿಗಳಿಗೆ, ಹಾಗೂ ಶಾಲಾ ಮಕ್ಕಳಿಗೆ ಟ್ರಾಫಿಕ್‌ನಿಂದಾಗಿ ಕಿರಿಕಿರಿ ಆಗುತ್ತಿದೆ. ಶಿವಮೊಗ್ಗ,ಹೆಬ್ರಿ, ಮಣಿಪಾಲ, ಉಡುಪಿ, ಮಲ್ಪೆ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದ್ದು, ಟ್ರಾಫಿಕ್ ಜಾಮ್‌ನನಿಂದಾಗಿ ಹೆಬ್ರಿ ಸರ್ಕಲ್ ಗಳಲ್ಲಿ ರಸ್ತೆಯಲ್ಲಿಯೇ ವಾಹನಗಳನ್ನು ಗಂಟೆಗಟ್ಟಲೆ ನಿಲ್ಲಿಸುತ್ತಾರೆ. ಇದರಿಂದ ಸ್ಥಳೀಯ ವಾಹನ ಚಾಲಕರಿಗೆ, ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಪಾದಾಚಾರಿಗಳಿಗೆ ರಸ್ತೆಯಲ್ಲಿ ಸಂಚರಿಸುವುದೇ ದೊಡ್ಡ ಸವಾಲಾಗಿದೆ.ಆದ್ದರಿಂದ ಆದಷ್ಟು ಶೀಘ್ರವಾಗಿ ಸಮಸ್ಯೆ ಬಗೆಹರಿಸುವಂತೆ ಮನವಿಯಲ್ಲಿ ಉಲ್ಲೇಖಿಸಲಾಗಿದೆ.