ಕಾರ್ಕಳ: ಕಾರ್ಕಳ ತಾಲೂಕು ಸಾಣೂರಿನ ನಿವೃತ್ತ ನರ್ಸ್ ಒಬ್ಬರಿಗೆ ಯುನಿಯನ್ ಬ್ಯಾಂಕ್ ಹೆಸರಿನಲ್ಲಿ ಕರೆ ಮಾಡಿ ಕೆವೈಸಿ ಅಪ್‌ಡೇಟ್ ಎಂದು ನಂಬಿಸಿ 5 ಲಕ್ಷಕ್ಕೂ ಅಧಿಕ ಹಣ ವಂಚಿಸಿರುವ ಪ್ರಕರಣ ನಡೆದಿದೆ.
ಸಾಣೂರಿನ ಪ್ರೇಮಲತಾ (58) ಎಂಬವರು ನಿವೃತ್ತ ನರ್ಸ್ ಆಗಿದ್ದು, ಸಾಣೂರು ಯುನಿಯನ್ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದರು. ಜೂ.26 ರಂದು ಪ್ರೇಮಲತಾ ಅವರು ರೈಲಿನಲ್ಲಿ ಮುಂಬೈಗೆ ಹೋಗುತ್ತಿದ್ದ ವೇಳೆ 7076260938 ನಂಬರ್‌ನಿAದ ಅಪರಿಚಿತ ವ್ಯಕ್ತಿ ಕರೆ ಮಾಡಿ ತಾನು ಕಾರ್ಕಳ ಸಾಣೂರು ಬ್ರಾಂಚ್ ಯುನಿಯನ್ ಬ್ಯಾಂಕ್‌ನಿAದ ಮಾತನಾಡುತ್ತಿರುವುದಾಗಿ ತಿಳಿಸಿ ನಿಮ್ಮ ಕೆವೈಸಿ ಅಪ್‌ಡೇಟ್ ಮಾಡಲು ಇದೆ ನಿಮ್ಮ ಅಕೌಂಟ್ ನಂಬ್ರ ಹೇಳಿ ಎಂದು ಕೇಳಿದ್ದ. ಆಗ ಪ್ರೇಮಲತಾ ಅವರು ತನಗೆ ಅಕೌಂಟ್ ನಂಬರ್ ನೆನಪಿಲ್ಲ ಎಂದು ಹೇಳಿದಾಗ ಡೆಬಿಟ್ ಕಾರ್ಡ್ ನಂಬರ್ ಹೇಳುವಂತೆ ತಿಳಿಸಿದ್ದ. ಆಗ ಆ ವ್ಯಕ್ತಿ ಬ್ಯಾಂಕ್‌ನಿAದ ಮಾತನಾಡುವುದೆಂದು ನಂಬಿದ ಪ್ರೇಮಲತಾ ವರು ತನ್ನ ಡೆಬಿಟ್ ಕಾರ್ಡ್ ನಂಬರ್ ಅಪರಿಚಿತ ವ್ಯಕ್ತಿಗೆ ನೀಡಿದ್ದರು.
ಬಳಿಕ ಮತ್ತೆ ಅದೇ ವ್ಯಕ್ತಿ ಕರೆ ಮಾಡಿ ಕೆವೈಸಿ ಅಪ್‌ಡೇಟ್ ಆಗಿರುವುದಾಗಿ ತಿಳಿಸಿದ್ದ. ಆದರೆ ಅದೇ ದಿನ (ಜೂ.26) ರಾತ್ರಿ 8:18ಕ್ಕೆ ಪ್ರೇಮಲತಾ ಅವರ ಯುನಿಯನ್ ಬ್ಯಾಂಕ್ ಖಾತೆಯಿಂದ 2,50,000 ರೂ. ಬಳಿಕ 2,50,000 ರೂ., ರಾತ್ರಿ 19,000 ರೂ. ಒಟ್ಟು 5,19,000 ರೂ. ನಗದು ಕಡಿತಗೊಂಡಿದೆ.
ಈ ಕುರಿತು ಉಡುಪಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.