
ಕಾರ್ಕಳ, ಏ.22: ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಕಲಂಬಾಡಿ ಪದವು ಎಂಬಲ್ಲಿ ಮದ್ಯವ್ಯಸನಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕಲಂಬಾಡಿ ಪದವು ನಿವಾಸಿ ಗಣೇಶ್ ಬೋಯರ್(31ವ) ಆತ್ಮಹತ್ಯೆ ಮಾಡಿಕೊಂಡವರು.
ಕೂಲಿ ಕೆಲಸ ಮಾಡಿಕೊಂಡಿದ್ದ ಗಣೇಶ್ ವಿಪರೀತ ಮದ್ಯಪಾನ ಮಾಡುತ್ತಿದ್ದು, ಯಾವಾಗಲೂ ಮದ್ಯಪಾನ ಮಾಡಿ ತಾಯಿಯ ಜೊತೆ ಜಗಳವಾಡುತ್ತಿದ್ದರು. ನಿನ್ನೆ(ಏ.21) ಮಧ್ಯಾಹ್ನ ಮದ್ಯಪಾನ ಮಾಡಿಕೊಂಡು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಮಗನನ್ನು ಸಮಾಧಾನ ಮಾಡುವಂತೆ ತಾಯಿ ಉಷಾ ಅವರು ಅಲ್ಲಿಯೇ ಸಮೀಪ ವಾಸವಿರುವ ತನ್ನ ಅಕ್ಕನ ಮಗನನ್ನು ಕರೆತರಲು ಅವರ ಮನೆಗೆ ಹೋಗಿದ್ದರು. ಅದರಂತೆ ಅಕ್ಕನ ಮಗನನ್ನು ಕರೆದುಕೊಂಡು ಮನೆಗೆ ವಾಪಾಸಾಗುವ ವೇಳೆಗೆ ಗಣೇಶ್ ಬೋಯರ್ ಮನೆಯ ಮಾಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರು ತನಗಿರುವ ಮದ್ಯಪಾನದ ಚಟದಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಶಂಕಿಸಲಾಗಿದ್ದು, ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


.
.
.
.
.
.
.
.
.
.

ಕಾರ್ಕಳ, ಏ. 20: ಕಾರ್ಕಳ ತಾಲೂಕು ಮರ್ಣೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆನಂದ ಸೆರ್ವೆಗಾರ್ (65ವ) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಅವರು ಕಳೆದ 15 ವರ್ಷಗಳಿಂದ ಮರ್ಣೆ ಗ್ರಾಮದ ವಸಂತ ಶೆಟ್ಟಿಯವರ ಕುಂಠಿನಿ ಮನೆ ಎಂಬಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು.ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದ ಅವರು ಅದೇ ಕಾರಣಕ್ಕೆ ಮನನೊಂದು ನಿನ್ನೆ(ಏ.19) ರಾತ್ರಿ ಮನೆಯ ಮುಂಭಾಗದ ಮಾವಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



.
.
.
.
.
.
.
.
.
.
