Share this news

ಕಾರ್ಕಳ : ಕಾರ್ಕಳ ತಾಲೂಕು ಮುಡಾರು ಗ್ರಾಮದ ಬಜಗೋಳಿ  ಲಕ್ಷ್ಮೀ ವೈನ್ ಶಾಪ್‌ನ ಪಕ್ಕದ ರಸ್ತೆಯಲ್ಲಿ  ಸಾರ್ವಜನಿಕರನ್ನು ಸೇರಿಸಿಕೊಂಡು ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಆಡುತ್ತಿದ್ದ ದೇವೆಂದ್ರ ಶೆಟ್ಟಿ ಎಂಬಾತನನ್ನು ಕಾರ್ಕಳ ಗಾಮಾಂತರ ಠಾಣಾ ಪೊಲೀಶರು ಬಂಧಿಸಿ ರೂ.25,000 ರೂ. ನಗದು ವಶಪಡಿಸಿಕೊಂಡಿದ್ದಾರೆ.


ಸಾರ್ವಜನಿಕರಲ್ಲಿ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಹಣ ಹಾಕಿದರೆ ಹೆಚ್ಚು ಹಣವನ್ನು ಕೊಡುವುದಾಗಿ ನಂಬಿಸಿ ಹಣ ಪಡೆದು ಜೂಜಾಟ ನಡೆಸುತ್ತಿದ್ದ ಸ್ಥಳಕ್ಕೆ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ ಸ್ಥಳದಲ್ಲಿದ್ದ ಮಧು ಅಜೆಕಾರು, ಪ್ರಭಾಕರ ನೆಲ್ಲಿಕಾರು,ಕರ್ಣ ನಲ್ಲೂರು, ನವೀನ್ ಬಜಗೋಳಿ ಎಂಬವರು ಪರಾರಿಯಾಗಿದ್ದು ದೇವೆಂಧ್ರ ಶೆಟ್ಟಿ ಎಂಬವನ್ನು ಬಂಧಿಸಿದ ಪೊಲೀಸರು ಆತನಿಂದ 2 ಕೀಪ್ಯಾಡ್ ಮೊಬೈಲ್, 1 ಆಂಡ್ರಾಯ್ಡ್ ಮೊಬೈಲ್ ಹಾಗೂ ರೂ.25,000 ನಗದನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ

 

Leave a Reply

Your email address will not be published. Required fields are marked *