ಬೆಂಗಳೂರು : ರಾಜ್ಯ ಸರ್ಕಾರ ಅಕ್ರಮ-ಸಕ್ರಮ ನಿವೇಶನ ಯೋಜನೆಯಡಿ ಹಕ್ಕು ಪತ್ರ ಪಡೆದವರಿಗೆ ಸಿಹಿಸುದ್ದಿ ನೀಡಿದ್ದು, ನಿವೇಶನ ಹಕ್ಕುಪತ್ರ ಅಡಮಾನವಿಟ್ಟು ಬ್ಯಾಂಕ್ ಸಾಲ ಪಡೆಯಲು ಅವಕಾಶ ನೀಡಿದೆ.
ರಾಜ್ಯ ಸರ್ಕಾರವು ಈ ಹಿಂದೆ ಅಕ್ರಮ-ಸಕ್ರಮ ನಿವೇಶನ ಹಕ್ಕುಪತ್ರ ಪಡೆದವರು ಅಡಮಾನ ಮಾಡಬಾರದೆಂಬ ಷರತ್ತು ವಿಧಿಸಿತ್ತು. ಹೀಗಾಗಿ ಅಕ್ರಮ-ಸಕ್ರಮ ಯೋಜನೆಯಡಿ ನಿವೇಶನ ಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ಬ್ಯಾಂಕ್ ಗಳು ಸಾಲ ನೀಡುತ್ತಿರಲಿಲ್ಲ. ಇದೀಗ ರಾಜ್ಯ ಸರ್ಕಾರವು ನಿವೇಶನ ಹಕ್ಕುಪತ್ರ ಅಡಮಾನವಿಟ್ಟು ಬ್ಯಾಂಕ್ ಸಾಲ ಪಡೆಯಲು ಅವಕಾಶ ನೀಡಿದೆ.
ರಾಜ್ಯ ಸರ್ಕಾರವು ಗೃಹ ನಿರ್ಮಾಣ ಅಡಮಾನ ಸಾಲಕ್ಕೆ ಯಾವುದೇ ನಿರ್ಬಂಧ ವಿಧಿಸದೆ ಬ್ಯಾಂಕಿನಲ್ಲಿ ಸಾಲ ನೀಡುವಂತೆ ಆದೇಶ ಹೊರಡಿಸಲಾಗಿದೆ.ಈ ಮೂಲಕ ಅಕ್ರಮ-ಸಕ್ರಮ ನಿವೇಶನ ಯೋಜನೆಯಡಿ ಹಕ್ಕುಪತ್ರ ಅಡಮಾನವಿಟ್ಟು ಬ್ಯಾಂಕ್ ಸಾಲ ಪಡೆಯಲು ಅವಕಾಶ ನೀಡಲಾಗಿದೆ.